
ಕೊಝಿಕೊಡೆ ಜಿಲ್ಲೆಯ ಕರಕ್ಕಡ್ನಲ್ಲಿರುವ ವಗ್ಭಾತಾನಂದ ಪಾರ್ಕ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡ್ತಿದೆ. ಕೇರಳದ ಪ್ರವಾಸೋದ್ಯಮ ಇಲಾಖೆ ಸಚಿವ ಕೊಡಕಂಪಲ್ಲಿ ಸುರೇಂದ್ರನ್ ಈ ಪಾರ್ಕ್ನ್ನ ಲೋಕಾರ್ಪಣೆ ಮಾಡಿದ ಕೆಲವೇ ಗಂಟೆಗಳಲ್ಲಿ ಪಾರ್ಕ್ನ ರಸ್ತೆ, ಮುಖ್ಯ ದ್ವಾರ ಸೇರಿದಂತೆ ವಿವಿಧ ಫೋಟೊಗಳು ವೈರಲ್ ಆಗಿವೆ.
ಈ ಪಾರ್ಕ್ನಲ್ಲಿ ವಿವಿಧ ಪ್ರತಿಮೆಗಳು, ಬ್ಯಾಡ್ಮಿಂಟನ್ ಕೋರ್ಟ್, ಮಕ್ಕಳ ಪಾರ್ಕ್ , ಸಾರ್ವಜನಿಕ ಶೌಚಾಲಯ ಸೇರಿದಂತೆ ಸಾಕಷ್ಟು ಸೌಲಭ್ಯಗಳನ್ನ ಒದಗಿಸಲಾಗಿದೆ. ವ್ಹೀಲ್ಚೇರ್ನಲ್ಲಿ ಓಡಾಡುವವರಿಗೂ ನೆರವಾಗುವ ರೀತಿಯಲ್ಲಿ ಪಾರ್ಕ್ಗೆ ಟೈಲ್ಸ್ನ್ನು ಅಳವಡಿಸಲಾಗಿದೆ.

