alex Certify ವಿದೇಶಗಳನ್ನೂ ಮೀರಿಸುವಂತಿದೆ ಕೇರಳದ ಈ ಪಾರ್ಕ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದೇಶಗಳನ್ನೂ ಮೀರಿಸುವಂತಿದೆ ಕೇರಳದ ಈ ಪಾರ್ಕ್​..!

ಕೇರಳದಲ್ಲಿ ತೀರಾ ಇತ್ತೀಚೆಗೆ ನಿರ್ಮಾಣ ಮಾಡಲಾದ ಪಾರ್ಕ್​ನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿವೆ. ಪಾರ್ಕ್​ನ್ನ ಸೌಂದರ್ಯವನ್ನ ಕಂಡ ನೆಟ್ಟಿಗರು ಇದನ್ನ ಯುರೋಪ್​ ಸಿಟಿಗೆ ಹೋಲಿಕೆ ಮಾಡ್ತಿದ್ದಾರೆ.

ಕೊಝಿಕೊಡೆ ಜಿಲ್ಲೆಯ ಕರಕ್ಕಡ್​ನಲ್ಲಿರುವ ವಗ್ಭಾತಾನಂದ ಪಾರ್ಕ್​ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡ್ತಿದೆ. ಕೇರಳದ ಪ್ರವಾಸೋದ್ಯಮ ಇಲಾಖೆ ಸಚಿವ ಕೊಡಕಂಪಲ್ಲಿ ಸುರೇಂದ್ರನ್ ಈ ಪಾರ್ಕ್​ನ್ನ ಲೋಕಾರ್ಪಣೆ ಮಾಡಿದ ಕೆಲವೇ ಗಂಟೆಗಳಲ್ಲಿ ಪಾರ್ಕ್​ನ ರಸ್ತೆ, ಮುಖ್ಯ ದ್ವಾರ ಸೇರಿದಂತೆ ವಿವಿಧ ಫೋಟೊಗಳು ವೈರಲ್​ ಆಗಿವೆ.

ಈ ಪಾರ್ಕ್​ನಲ್ಲಿ ವಿವಿಧ ಪ್ರತಿಮೆಗಳು, ಬ್ಯಾಡ್ಮಿಂಟನ್​ ಕೋರ್ಟ್, ಮಕ್ಕಳ ಪಾರ್ಕ್​ , ಸಾರ್ವಜನಿಕ ಶೌಚಾಲಯ ಸೇರಿದಂತೆ ಸಾಕಷ್ಟು ಸೌಲಭ್ಯಗಳನ್ನ ಒದಗಿಸಲಾಗಿದೆ. ವ್ಹೀಲ್​ಚೇರ್​ನಲ್ಲಿ ಓಡಾಡುವವರಿಗೂ ನೆರವಾಗುವ ರೀತಿಯಲ್ಲಿ ಪಾರ್ಕ್​ಗೆ ಟೈಲ್ಸ್​ನ್ನು ಅಳವಡಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...