ಸಂಪೂರ್ಣ ದೇಶ ಕೊರೊನಾ ಎರಡನೇ ಅಲೆಯ ಭೀಕರತೆಗೆ ನಲುಗಿ ಹೋಗಿರುವ ಈ ಸಂದರ್ಭದಲ್ಲಿ ಮಧ್ಯಪ್ರದೇಶದ ಗ್ರಾಮವೊಂದು ಒಂದೇ ಒಂದು ಕೊರೊನಾ ಕೇಸ್ಗಳನ್ನ ಹೊಂದದೆಯೇ ನಿರಾಳವಾಗಿದೆ.
ಅಂದಹಾಗೆ ಈ ಗ್ರಾಮ ಕೋವಿಡ್ ಮುಕ್ತವಾಗಿ ಮಾರ್ಪಡುವ ಹಿಂದೆ ಇಲ್ಲಿನ ಮಹಿಳೆಯರ ಕೊಡುಗೆ ತುಂಬಾನೇ ಇದೆ. ಸಂಪೂರ್ಣ ಗ್ರಾಮಕ್ಕೆ ಸ್ವಯಂಘೋಷಿತ ಲಾಕ್ಡೌನ್ ಹೇರುವ ಮೂಲಕ ಹೊರಗಿನವರ ಗ್ರಾಮದ ಎಂಟ್ರಿಗೆ ನಿರ್ಬಂಧ ಹೇರಿದ್ದಾರೆ.
ಚಿಖಲಾರ್ ಎಂಬ ಗ್ರಾಮ ಕಳ್ಳಭಟ್ಟಿ ಮಾರಾಟದ ಮೂಲಕ ಕುಖ್ಯಾತಿಯನ್ನ ಗಳಿಸಿತ್ತು. ಆದರೆ ಇದೀಗ ಮಹಿಳೆಯರ ಅವಿರತ ಪ್ರಯತ್ನದಿಂದಾಗಿ ಕೋವಿಡ್ ಮುಕ್ತ ಗ್ರಾಮ ಎಂಬ ಕೀರ್ತಿ ಸಂಪಾದಿಸಿದೆ.
ಗ್ರಾಮದ ಸುತ್ತಲೂ ಬಿದಿರಿನ ಬ್ಯಾರಿಕೇಡ್ ಹಾಕಿರುವ ಮಹಿಳೆಯರು ಗ್ರಾಮಕ್ಕೆ ಯಾರೂ ಎಂಟ್ರಿ ಕೊಡದಂತೆ ದೊಣ್ಣೆ ಹಿಡಿದು ಕಾಯುತ್ತಾರೆ. ಇದು ಮಾತ್ರವಲ್ಲದೇ ಗ್ರಾಮಕ್ಕೆ ಹತ್ತಿರ ಇರುವ ಹೆದ್ದಾರಿಯಲ್ಲಿ ಹಾದು ಹೋಗುವವರ ಮೇಲೂ ಕಣ್ಣಿಟ್ಟಿದ್ದಾರೆ.