ರೈಲ್ವೇ ಹಳಿಗಳನ್ನು ಪರೀಕ್ಷೆ ಮಾಡಲು ಹೋಗುವ ತನ್ನ ಸಿಬ್ಬಂದಿಗೆಂದು ಉತ್ತರ ಮಧ್ಯ ರೈಲ್ವೇ ಇಲಾಖೆಯು ವಿಶಿಷ್ಟವಾದ ಸೈಕಲ್‌ಗಳನ್ನು ಅಭಿವೃದ್ಧಿಪಡಿಸಿದೆ. ಈ ಸೈಕಲ್‌ಗಳನ್ನು ಕೇವಲ 3000 ರೂ.ಗಳಲ್ಲಿ ತಯಾರಿಸಬಹುದು.
ಸೈಕಲ್‌ಗಳು ಬಹಳ ಆರಾಮವಾಗಿ ಬಳಸಬಹುದಾಗಿದ್ದು, ಒಮ್ಮೆಲೆ ನಾಲ್ವರು ಸವಾರಿ ಮಾಡಬಹುದಾಗಿದೆ. ಈ ವ್ಯವಸ್ಥೆ ಮೂಲಕ ಟ್ರ‍್ಯಾಕ್‌ಮೆನ್‌ಗೆ ಹಳಿಗಳಲ್ಲಿ ಇರುವ ಅಸಮತೋಲತೆಗಳನ್ನು ಬೇಗನೇ ಪತ್ತೆ ಮಾಡಲು ನೆರವಾಗಲಿದೆ ಎಂದು CPRO ಅಜಿತ್ ಸಿಂಗ್ ತಿಳಿಸಿದ್ದಾರೆ.
ಮಾನ್ಸೂನ್‌ನ ಕಾಲದಲ್ಲಿ ಈ ಸೈಕಲ್‌ಗಳು ಬಹಳ ಅನುಕೂಲವಾಗಲಿದ್ದು, ಅನಗತ್ಯವಾಗಿ ರೈಲುಗಳನ್ನು ನಿಲ್ಲಿಸಬೇಕಾದ ಪ್ರಮೇಯವನ್ನು ಇದರಿಂದ ತೊಡೆದು ಹಾಕಬಹುದಾಗಿದೆ.