ಕೊರೋನಾ ಸಾಂಕ್ರಮಿಕ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ. ಸರ್ಕಾರ ಕೂಡ ಈ ಸಂಬಂಧ ನಿಯಮಗಳನ್ನು ಜಾರಿ ಮಾಡಿದೆ. ಅಂತದ್ದರಲ್ಲಿ ಸಾಮಾಜಿಕ ಅಂತರ ಮರೆತು ಬರ್ತ್ ಡೇ ಆಚರಿಸಿದ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿರುವ ದೆಹಲಿ ಪೊಲೀಸರು, ಅವರನ್ನು ಬಂಧಿಸಿದ್ದಾರೆ.
ಲಾಕ್ಡೌನ್ ಸಡಿಲಿಕೆ ನಂತರ ಹೋಟೆಲ್ ಹಾಗು ರೆಸ್ಟೋರೆಂಟ್ ಗಳು ಆರಂಭವಾಗಿವೆ. ಪಶ್ಚಿಮ ದೆಹಲಿಯ ರಾಜಾಹುಲಿ ಗಾರ್ಡನ್ ರೆಸ್ಟೋರೆಂಟ್ ನಲ್ಲಿ ಹುಟ್ಟುಹಬ್ಬದ ಪಾರ್ಟಿಯೊಂದು ಆಯೋಜನೆಗೊಂಡಿತ್ತು, 38ಕ್ಕೂ ಹೆಚ್ಚು ಮಂದಿ ಅಲ್ಲಿ ಜಮಾಯಿಸಿದ್ದರು, ಸಾಮಾಜಿಕ ಅಂತರ ಅಲ್ಲಿರಲಿಲ್ಲ.
ರಾತ್ರಿ ಒಂಬತ್ತರ ಸುಮಾರಿಗೆ ಪೊಲೀಸರು ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ರೆಸ್ಟೋರೆಂಟ್ ಬಳಿ ಅನುಮಾನಸ್ಪದವಾಗಿ ಜನರ ಚಲನವಲನಕಂಡು ದಾಳಿ ಮಾಡಿದ್ದಾರೆ. ಅಲ್ಲಿ ಹುಕ್ಕಾ ಸೇವನೆಗೂ ಅವಕಾಶ ನೀಡಲಾಗಿತ್ತು. ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ನಿಯಮ ಉಲ್ಲಂಘಿಸಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ 25 ವರ್ಷದ ಮೊಹಮದ್ ಆಸಿಫ್, ಪಾರ್ಟಿಯ ಸಂಘಟಕ ಮಜೀದ್, ರೆಸ್ಟೋರೆಂಟ್ ನ ವ್ಯವಸ್ಥಾಪಕ ಮನೋಜ್ ಕಪೂರ್, ಮಾಲೀಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದರು.