ಕೊರೊನಾ ವೈರಸ್ ಭಯದ ನಡುವಿನಲ್ಲೇ ದೇಶದ ಜನತೆ ಹೊಸ ವರ್ಷವನ್ನ ಬರ ಮಾಡಿಕೊಂಡಿದ್ದಾರೆ. ಹೊಸ ವರ್ಷದ ಸಂಭ್ರಮಕ್ಕೆ ಬ್ರೇಕ್ ಹಾಕುವ ಸಲುವಾಗಿ ದೆಹಲಿ, ಮುಂಬೈ ಹಾಗೂ ಬೆಂಗಳೂರು ಸೇರಿದಂತೆ ಹಲವೆಡೆ ನೈಟ್ ಕರ್ಫ್ಯೂ ವಿಧಿಸಲಾಗಿತ್ತು.
ಈ ಬಾರಿ ಸಾಂಕ್ರಾಮಿಕದ ಭಯದಿಂದಾಗಿ ಅನೇಕರು ಪಾರ್ಟಿಗೆ ಆದ್ಯತೆ ನೀಡುವ ಬದಲು ಮನೆಯಲ್ಲೇ ಉಳಿಯುವ ನಿರ್ಧಾರ ಕೈಗೊಂಡಿದ್ದಾರೆ. ಆದರೆ ಗೋವಾದಲ್ಲಿ ನಡೆದ ಪಾರ್ಟಿಗಳ ಫೋಟೋಗಳನ್ನ ನೋಡ್ತಿದ್ರೆ ಇವರಿಗೆ ಕೊರೊನಾ ಭಯವೇ ಇಲ್ಲವೇನೋ ಎಂದೆನಿಸುತ್ತೆ.
ಪಾರ್ಟಿಗಳಲ್ಲಿ ಹಾಜರಿದ್ದ ಅನೇಕರು ಮಾಸ್ಕ್ ಧರಿಸದೇ ಇರೋದನ್ನ ನೀವಿಲ್ಲಿ ಗಮನಿಸಬಹುದಾಗಿದೆ. ಮಾತ್ರವಲ್ಲದೇ ಸಾಮಾಜಿಕ ಅಂತರ ಕೂಡ ಕಂಡು ಬರಲಿಲ್ಲ. ಗೋವಾದ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದವರಿಗೆ ಹಾಕಲಾಗುತ್ತಿದ್ದ ನೂರು ರೂಪಾಯಿ ದಂಡವನ್ನ ದುಪ್ಪಟ್ಟು ಮಾಡಿದ ಬಳಿಕವೂ ಜನತೆ ಎಚ್ಚೆತ್ತುಕೊಂಡಂತೆ ಕಂಡು ಬರಲಿಲ್ಲ.