alex Certify ‘ಶೋಲೆ’ ಮಾದರಿ ಆತ್ಮಹತ್ಯೆ ಬೆದರಿಕೆಗಳಿನ್ನು ಬಂದ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಶೋಲೆ’ ಮಾದರಿ ಆತ್ಮಹತ್ಯೆ ಬೆದರಿಕೆಗಳಿನ್ನು ಬಂದ್

ಸರ್ಕಾರಿ ವಾಟರ್​ ಟ್ಯಾಂಕ್​ಗಳನ್ನ ಹತ್ತಿ ಆತ್ಮಹತ್ಯೆಗೆ ಯತ್ನಿಸುವವರ ಸಮಸ್ಯೆಯಿಂದ ಪಾರಾಗೋಕೆ ಉತ್ತರ ಪ್ರದೇಶ ಸರ್ಕಾರ ಟ್ಯಾಂಕ್​ನ ಮೆಟ್ಟಿಲುಗಳನ್ನ ಲಾಕ್​ ಮಾಡುವ ಹಾಗೂ ಬಳಕೆ ಮಾಡದ ಟ್ಯಾಂಕ್​ಗಳನ್ನ ನಾಶ ಮಾಡುವ ನಿರ್ಧಾರಕ್ಕೆ ಬಂದಿವೆ.

ಕೆಲ ದಿನಗಳ ಹಿಂದಷ್ಟೇ ವಕೀಲ ​ ಮತ್ತವರ ಕುಟುಂಬ 60 ಗಂಟೆಗಳ ಕಾಲ ಪ್ರಯಾಗ್​ ರಾಜ್​ನಲ್ಲಿರುವ ವಾಟರ್​ ಟ್ಯಾಂಕ್​ ಮೇಲೆ ಇದ್ದು ಆತ್ಮಹತ್ಯೆ ಯತ್ನ ಮಾಡಿದ ಬೆನ್ನಲ್ಲೇ ಯೋಗಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

ವಕೀಲ ವಿಜಯ್​ ಪ್ರತಾಪ್​ ದಂಪತಿ ಹಾಗೂ ಮೂವರು ಮಕ್ಕಳು ಮತ್ತು ಇಬ್ಬರು ಸಂಬಂಧಿಕರು ಬೇಲಿ ಏರಿಯಾದಲ್ಲಿರುವ ವಾಟರ್​ ಟ್ಯಾಂಕ್​ ಏರಿದ್ದರು.

ಅವರು ಹೇಳಿರುವ ಹಲವು ಪ್ರಕರಣಗಳನ್ನ ಸಿಬಿಐ ತನಿಖೆಗೆ ಸರ್ಕಾರ ಒಪ್ಪಿಸದ ಹೊರತು ಕೆಳಗೆ ಇಳಿಯುವ ಮಾತೇ ಇಲ್ಲ ಅಂತಾ ಬೆದರಿಕೆಯನ್ನೂ ಒಡ್ಡಿದ್ದರು.

ಈ ರೀತಿ ಘಟನೆಗಳು ಮತ್ತೆ ಮರುಕಳಿಸದಂತೆ ತಡೆಯುವ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ ಆರ್​​.ಕೆ. ತಿವಾರಿ ಜಿಲ್ಲಾ ಮ್ಯಾಜಿಸ್ಟ್ರೇಟ್​ಗಳಿಗೆ ಪತ್ರ ಬರೆದಿದ್ದು ಎಲ್ಲಾ ನೀರಿನ ಟ್ಯಾಂಕ್​ಗಳ ಮೆಟ್ಟಿಲುಗಳನ್ನ ಲಾಕ್​ ಮಾಡಿ. ಬಳಕೆಗೆ ಯೋಗ್ಯವಲ್ಲದೇ ಪಾಳು ಬಿದ್ದಿರುವ ಟ್ಯಾಂಕ್​ಗಳನ್ನ ನಾಶ ಮಾಡಿ ಅಂತಾ ಸೂಚನೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...