ಸರ್ಕಾರಿ ವಾಟರ್ ಟ್ಯಾಂಕ್ಗಳನ್ನ ಹತ್ತಿ ಆತ್ಮಹತ್ಯೆಗೆ ಯತ್ನಿಸುವವರ ಸಮಸ್ಯೆಯಿಂದ ಪಾರಾಗೋಕೆ ಉತ್ತರ ಪ್ರದೇಶ ಸರ್ಕಾರ ಟ್ಯಾಂಕ್ನ ಮೆಟ್ಟಿಲುಗಳನ್ನ ಲಾಕ್ ಮಾಡುವ ಹಾಗೂ ಬಳಕೆ ಮಾಡದ ಟ್ಯಾಂಕ್ಗಳನ್ನ ನಾಶ ಮಾಡುವ ನಿರ್ಧಾರಕ್ಕೆ ಬಂದಿವೆ.
ಕೆಲ ದಿನಗಳ ಹಿಂದಷ್ಟೇ ವಕೀಲ ಮತ್ತವರ ಕುಟುಂಬ 60 ಗಂಟೆಗಳ ಕಾಲ ಪ್ರಯಾಗ್ ರಾಜ್ನಲ್ಲಿರುವ ವಾಟರ್ ಟ್ಯಾಂಕ್ ಮೇಲೆ ಇದ್ದು ಆತ್ಮಹತ್ಯೆ ಯತ್ನ ಮಾಡಿದ ಬೆನ್ನಲ್ಲೇ ಯೋಗಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.
ವಕೀಲ ವಿಜಯ್ ಪ್ರತಾಪ್ ದಂಪತಿ ಹಾಗೂ ಮೂವರು ಮಕ್ಕಳು ಮತ್ತು ಇಬ್ಬರು ಸಂಬಂಧಿಕರು ಬೇಲಿ ಏರಿಯಾದಲ್ಲಿರುವ ವಾಟರ್ ಟ್ಯಾಂಕ್ ಏರಿದ್ದರು.
ಅವರು ಹೇಳಿರುವ ಹಲವು ಪ್ರಕರಣಗಳನ್ನ ಸಿಬಿಐ ತನಿಖೆಗೆ ಸರ್ಕಾರ ಒಪ್ಪಿಸದ ಹೊರತು ಕೆಳಗೆ ಇಳಿಯುವ ಮಾತೇ ಇಲ್ಲ ಅಂತಾ ಬೆದರಿಕೆಯನ್ನೂ ಒಡ್ಡಿದ್ದರು.
ಈ ರೀತಿ ಘಟನೆಗಳು ಮತ್ತೆ ಮರುಕಳಿಸದಂತೆ ತಡೆಯುವ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ ಆರ್.ಕೆ. ತಿವಾರಿ ಜಿಲ್ಲಾ ಮ್ಯಾಜಿಸ್ಟ್ರೇಟ್ಗಳಿಗೆ ಪತ್ರ ಬರೆದಿದ್ದು ಎಲ್ಲಾ ನೀರಿನ ಟ್ಯಾಂಕ್ಗಳ ಮೆಟ್ಟಿಲುಗಳನ್ನ ಲಾಕ್ ಮಾಡಿ. ಬಳಕೆಗೆ ಯೋಗ್ಯವಲ್ಲದೇ ಪಾಳು ಬಿದ್ದಿರುವ ಟ್ಯಾಂಕ್ಗಳನ್ನ ನಾಶ ಮಾಡಿ ಅಂತಾ ಸೂಚನೆ ನೀಡಿದ್ದಾರೆ.