
ವಿಡಿಯೋದಲ್ಲಿ ಸ್ಕೂಟಿಯ ಮೇಲೆ ಮಹಿಳೆಯೊಬ್ಬರು ಕುಳಿತಿದ್ದರೆ ಇನ್ನೊಬ್ಬ ಮಹಿಳೆ ಟ್ರಾಫಿಕ್ ಪೊಲೀಸ್ ಜೊತೆ ಮಾತನಾಡುತ್ತಿದ್ದಾಳೆ. ಆ ಮಹಿಳೆಯನ್ನ ಹತ್ತಿರಕ್ಕೆ ಕರೆದ ಮಹಿಳಾ ಪೊಲೀಸ್ ಪಿಸು ಮಾತುಗಳನ್ನ ಆಡಿದ್ದಾರೆ. ಕೂಡಲೇ ಮಹಿಳೆ ಹಣವನ್ನ ತೆಗೆದು ಆಕೆಯ ಪ್ಯಾಂಟ್ ಪ್ಯಾಕೆಟ್ನೊಳಕ್ಕೆ ಹಾಕಿ ಸ್ಕೂಟಿ ಸಮೇತ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಈ ವಿಡಿಯೋ ಇದೀಗ ಟ್ವಿಟರ್, ವಾಟ್ಸಾಪ್, ಯುಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಇದು ಫೋನ್ ಪೇಯೂ ಅಲ್ಲ, ಗೂಗಲ್ ಪೇಯೂ ಅಲ್ಲ. ಬದಲಾಗಿ ನೇರವಾಗಿ ಪಾಕೆಟ್ ಪೇ ಎಂದು ವ್ಯಂಗ್ಯವಾಡಿದ್ದಾರೆ.