
ಮೂಲ ಶಿಕ್ಷಣ ಮಂಡಳಿಯ 1 ಲಕ್ಷ 59 ಸಾವಿರ ವಿದ್ಯಾಲಯಗಳಲ್ಲಿ ಸರಿ ಸುಮಾರಿ 1 ಕೋಟಿ 60 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕೊರೊನಾ ಕಾರಣದಿಂದಾಗಿ ಕಳೆದ ವರ್ಷ ಮಾರ್ಚ್ನಿಂದ ಶಾಲೆಗಳನ್ನ ಬಂದ್ ಮಾಡಲಾಗಿತ್ತು. ಅಲ್ಲದೇ 2019-20ನೇ ಸಾಲಿನಲ್ಲೂ ಉತ್ತರ ಪ್ರದೇಶ ಸರ್ಕಾರ ಪರೀಕ್ಷೆ ಇಲ್ಲದೇ ಈ ಮಕ್ಕಳನ್ನ ಮುಂದಿನ ತರಗತಿಗೆ ಪಾಸ್ ಮಾಡಿತ್ತು.
ಜುಲೈ ತಿಂಗಳಿನಿಂದ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಆರಂಭಿಸಲಾಗಿತ್ತು, ಆದರೆ ಸರ್ಕಾರಿ ಶಾಲೆಗಳಲ್ಲಿ ಬಡ ಮಕ್ಕಳ ಸಂಖ್ಯೆಯೇ ಹೆಚ್ಚಿರುವ ಕಾರಣ ಆನ್ಲೈನ್ ತರಗತಿ ಸಾಧ್ಯವಾಗಿಲ್ಲ. 6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಫೆಬ್ರವರಿಯಿಂದ ತರಗತಿಗಳು ಆರಂಭವಾಗಿದೆ. 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಸೋಮವಾರದಿಂದ ಶಾಲೆಗಳು ತೆರೆದಿವೆ.
ಪ್ರಾಥಮಿಕ ಶಿಕ್ಷಣ ವಿಭಾಗದ ಎಸಿಎಸ್ ರೇಣುಕಾ ಕುಮಾರ್ ಈ ವಿಚಾರವಾಗಿ ಮಾತನಾಡಿ ಕೌನ್ಸಿಲ್ ಶಾಲೆಗಳಲ್ಲಿ ಈ ವರ್ಷವೂ ಪರೀಕ್ಷೆ ನಡೆಯೋದಿಲ್ಲ. ನಾವು 100 ದಿನಗಳ ಪ್ರೇರಣಾ ಜ್ಞಾನೋತ್ಸವ ಎಂಬ ಕಾರ್ಯಕ್ರಮವನ್ನ ನಡೆಸುತ್ತಿದ್ದೇವೆ. ಇದರ ಅಡಿಯಲ್ಲಿ ಮಕ್ಕಳಿಗೆ ಅಸೆಸ್ಮೆಂಟ್ ಮೂಲಕ ಮುಂದಿನ ತರಗತಿಗೆ ಬಡ್ತಿ ನೀಡ್ತೇವೆ ಎಂಧು ಹೇಳಿದ್ರು.