ಕೆಲ ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಜೋಡಿಯೊಂದು ಸ್ನಾನಗೃಹದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಚಿತ್ತೂರು ಜಿಲ್ಲೆಯ ಭಾರತಿಮಿಟ್ಟಾ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಮೃತ ದಂಪತಿಯನ್ನ 32 ವರ್ಷದ ಎಸ್. ಅಲ್ತಫ್ ಹುಸೇನ್ ಹಾಗೂ 30 ವರ್ಷದ ಸಮಿಯಾ ಎಂದು ಗುರುತಿಸಲಾಗಿದೆ.
ಮೃತ ಸಮಿಯಾ ಗ್ರಾಮೀಣ ಮಹಿಳಾ ಸಂಖ್ಯಾತ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಳು. ಅಲ್ತಫ್ ಬೆಂಗಳೂರಿನ ಸಾಫ್ಟ್ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಆದರೆ ಕಳೆದ 8-9 ತಿಂಗಳಿನಿಂದ ವರ್ಕ್ ಫ್ರಂ ಹೋಂನಲ್ಲಿದ್ದರು ಎನ್ನಲಾಗಿದೆ. ಸಮಿಯಾ ಸಹೋದ್ಯೋಗಿಗಳು ಗುರವಾರ ಆಕೆಯ ಮನೆಗೆ ಬಂದು ಬಾಗಿಲು ಬಡಿದ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ.
ಹೆದ್ದಾರಿಯಲ್ಲಿ ಹುಲಿ ಎಂಬ ಸುದ್ದಿ ಕೇಳಿ ಸ್ಥಳಕ್ಕೆ ದೌಡಾಯಿಸಿ ಬೇಸ್ತು ಬಿದ್ದ ಪೊಲೀಸ್
ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ದಂಪತಿ ಕರೆಂಟ್ ಶಾಕ್ನಿಂದ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ. ಇನ್ನೊಂದೆಡೆ ಆತ್ಮಹತ್ಯೆ ಮಾಡಿಕೊಂಡಿರಬಹುದಾ ಎಂಬ ಅನುಮಾನವೂ ಶುರುವಾಗಿದೆ. ಮೃತರ ದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.