ಹವಾಮಾನ ಬದಲಾವಣೆಯ ಸಮಸ್ಯೆ ದಿನೇ ದಿನೇ ದೊಡ್ಡ ಸಮಸ್ಯೆಯಾಗಿ ಬೆಳೆಯುತ್ತಿರುವಂತೆಯೇ ಘನ ತ್ಯಾಜ್ಯ ನಿರ್ವಹಣೆ ಬಲು ದೊಡ್ಡ ಪ್ರಶ್ನೆಯಾಗುತ್ತಿದೆ. ಎಲ್ಲೆಂದರಲ್ಲಿ ಲ್ಯಾಂಡ್‌ಫಿಲ್ಲಿಂಗ್ ಪಿಡುಗು ವಿಪರೀತವಾಗಿದ್ದು, ಈ ವಿಚಾರವಾಗಿ ಸುಸ್ಥಿರ ಹೆಜ್ಜೆಗಳನ್ನು ಇಡಬೇಕಿದೆ.
ನಿರುಪಯುಕ್ತ ವಸ್ತುಗಳನ್ನು ಮರುಬಳಕೆ ಮಾಡುವ ಮೂಲಕ ಆಧುನಿಕ ಹಾಗೂ ಸುಂದರವಾದ ರೆಸ್ಟೋರಂಟ್ ಒಂದನ್ನು ಅಹಮದಾಬಾದ್‌ನಲ್ಲಿ ನಿರ್ಮಾಣ ಮಾಡಲಾಗಿದೆ. ಈ ರೆಸ್ಟೋರಂಟ್ಅ ನ್ನು ಪೂರ್ಣವಾಗಿ ಜೇಡಿಮಣ್ಣು, ಅರಿಶಿಣ, ಸೆಣಬು, ಮರಗಳಿಂದ ನಿರ್ಮಿಸಲಾಗಿದೆ.
ಪಕ್ಷಿಗೆ ಗುಂಡಿಟ್ಟ ಮರುಕ್ಷಣವೇ ಅದರ ‘ಕರ್ಮ’ ಅನುಭವಿಸಿದ ಬೇಟೆಗಾರ
ಕಲಾವಿದ ದಂಪತಿ ಬದ್ರಿ ಹಾಗೂ ಸ್ನೇಹಲ್‌ರ ದಿ ಗ್ರಿಡ್ ಆರ್ಕಿಟೆಕ್ಟ್ಸ್ ಕಂಪನಿ ವತಿಯಿಂದ ಈ ರೆಸ್ಟೋರೆಂಟ್ ನಿರ್ಮಿಸಲಾಗಿದೆ.
’ಮಿಟ್ಟಿ ಕೇ ರಂಗ್’ ಹೆಸರಿನ ಈ ರೆಸ್ಟೋರೆಂಟ್‌ನಲ್ಲಿ ಭಾರತೀಯ ಕುಂಬಾರರ ಕರಕುಶಲ ಕೌಶಲ್ಯವನ್ನು ಸನ್ಮಾನಿಸಲಾಗಿದ್ದು, ಜೇಡಿ ಮಣ್ಣಿನ ಮಡಿಕೆಗಳು ಹಾಗೂ ಇತರ ವಸ್ತುಗಳನ್ನು ಇಟ್ಟು ಒಳಾಂಗಣ ವಿನ್ಯಾಸ ಮಾಡಲಾಗಿದೆ.