alex Certify ಸೋಂಕಿನ ಸಂಖ್ಯೆ ಕಡಿಮೆಯಾಗ್ತಿದ್ದರೂ ಏಕೆ ನಿಲ್ತಿಲ್ಲ ಸಾವಿನ ಸಂಖ್ಯೆ…? ಆಘಾತಕಾರಿ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಂಕಿನ ಸಂಖ್ಯೆ ಕಡಿಮೆಯಾಗ್ತಿದ್ದರೂ ಏಕೆ ನಿಲ್ತಿಲ್ಲ ಸಾವಿನ ಸಂಖ್ಯೆ…? ಆಘಾತಕಾರಿ ಮಾಹಿತಿ ಬಹಿರಂಗ

ಕೆಲ ದಿನಗಳಿಂದ ಭಾರತದಲ್ಲಿ ಕೊರೊನಾ ವೈರಸ್ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗ್ತಿದೆ. ಇದು ಸಂತೋಷದ ಸಂಗತಿ. ಆದ್ರೆ ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಮಾತ್ರ ಕಡಿಮೆಯಾಗುವ ಬದಲು ಏರಿಕೆಯಾಗ್ತಿದೆ. ಪರೀಕ್ಷೆ ಹೆಚ್ಚಿಸಿರುವುದ್ರಿಂದ ಪ್ರಯೋಜನವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಪರೀಕ್ಷೆಯನ್ನು ಎರಡೂವರೆ ಪಟ್ಟು ಹೆಚ್ಚಿಸಲಾಗಿದೆ. ಸೋಂಕುಗಳನ್ನು ಪತ್ತೆಹಚ್ಚಲು ಮತ್ತು ನಿಯಂತ್ರಿಸಲು ಇದು ಸಹಾಯ ಮಾಡಿದೆ. ಆದ್ರೆ ಹೆಚ್ಚಾಗ್ತಿರುವ ಸಾವಿನ ಸಂಖ್ಯೆ ಚಿಂತೆಗೀಡು ಮಾಡಿದೆ.

ಹಿಂದಿನ ಅಲೆಗೆ ಹೋಲಿಸಿದರೆ ಈ ಬಾರಿ ಯುವಕರ ಸಾವಿನ ಪ್ರಮಾಣ ದ್ವಿಗುಣವಾಗಿದೆ. ದೆಹಲಿ ಎನ್‌ಸಿಆರ್‌ನ 7-8 ಆಸ್ಪತ್ರೆಗಳಲ್ಲಿ ನಡೆಸಿದ ಅಧ್ಯಯನದ ಆಧಾರದ ಮೇಲೆ ಈ ಡೇಟಾ ಹೊರಬಂದಿದೆ. ಇದು ತುಂಬಾ ಆತಂಕಕಾರಿಯಾಗಿದೆ. ಮೇ 10 ರಂದು, ಭಾರತದಲ್ಲಿ ಕೊರೊನಾ ವೈರಸ್ ಸೋಂಕು 3 ಲಕ್ಷ 88 ಸಾವಿರ 58 ಆಗಿದ್ದು, ಇದು ಒಂದು ವಾರದ ನಂತರ ಮೇ 17 ರಂದು 3 ಲಕ್ಷ 19 ಸಾವಿರ 437 ಕ್ಕೆ ಇಳಿದಿದೆ. ಮೇ 10 ರಂದು, ಕೋವಿಡ್ -19ನಿಂದ ಸಾವನ್ನಪ್ಪಿದವರ ಸಂಖ್ಯೆ 3 ಸಾವಿರ 948 ಆಗಿದ್ದು, ಇದು ವಾರದ ನಂತರ 4 ಸಾವಿರದ ನೂರ ಮೂರಕ್ಕೆ ಏರಿದೆ.

ಕೊರೊನಾ ಸೋಂಕಿನ ಅಬ್ಬರ ಸ್ವಲ್ಪ ಮಟ್ಟಿಗೆ ತಗ್ಗಿದೆ. ಆಕ್ಸಿಜನ್ ಸೇರಿದಂತೆ ಬೆಡ್ ಸಮಸ್ಯೆ ಇಳಿಮುಖವಾಗಿದೆ. ಔಷಧಿಗಳು ಹೆಚ್ಚಿನ ಮಟ್ಟದಲ್ಲಿ ಸಿಗ್ತಿವೆ. ಲಾಕ್ಡೌನ್, ಕರ್ಫ್ಯೂ ಪರಿಣಾಮ ಕಾಣಿಸ್ತಿದೆ. ಆದ್ರೆ ಆಸ್ಪತ್ರೆಯಲ್ಲಿ ಸಾವಿನ ಸಂಖ್ಯೆ ಮಾತ್ರ ಕಡಿಮೆಯಾಗ್ತಿಲ್ಲ. ಭಾರತ ಇದೇ ಧೈರ್ಯ ಹಾಗೂ ಮನೋಭಾವದೊಂದಿಗೆ ಮುನ್ನುಗ್ಗಿದರೆ 15 ದಿನಗಳಲ್ಲಿ ಸಾವಿನ ಸಂಖ್ಯೆಯೂ ಗಣನೀಯವಾಗಿ ಇಳಿಯಲಿದೆ ಎಂದು ಜೆಎನ್‌ಯು ಸಿಎಸ್‌ಎಂಸಿಎಚ್ ಅಧ್ಯಕ್ಷ ಡಾ.ರಾಜೀಬ್ ದಾಸ್‌ಗುಪ್ತಾ ಹೇಳಿದ್ದಾರೆ.

ಯುವಕರಿಗೆ ಲಸಿಕೆ ಬಿದ್ದಿಲ್ಲ. ಕೊರೊನಾ ಎರಡನೇ ಅಲೆ ಯುವಕರಿಗೆ ಅಪಾಯಕಾರಿಯಾಗಿದೆ. ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಹೊರಗೆ ಓಡಾಡುವ ಕಾರಣ ಯುವಕರಿಗೆ ಕೊರೊನಾ ವೈರಸ್ ಕಾಡಲು ಮುಖ್ಯ ಕಾರಣ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...