
ನವದೆಹಲಿ: ಪೂರ್ವ ಲಡಾಖ್ ಗಾಲ್ವನ್ ಕಣಿವೆಯಲ್ಲಿ ಭಾರತ – ಚೀನಾ ಯೋಧರ ನಡುವೆ ಹಿಂಸಾತ್ಮಕ ಸಂಘರ್ಷ ನಡೆದ ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಈ ನಡುವೆಯೇ ಭಾರತೀಯ ಯೋಧರು ಕೇವಲ 72 ಗಂಟೆಯಲ್ಲಿ ಗಾಲ್ವನ್ ಸೇತುವೆಯನ್ನು ಪೂರ್ಣಗೊಳಿಸಿದ್ದಾರೆ.
ಗಾಲ್ವನ್ ನದಿ ಸೇತುವೆ ಕಾಮಗಾರಿಯನ್ನು 72 ಗಂಟೆಯೊಳಗೆ ಪೂರ್ಣಗೊಳಿಸುವ ಮೂಲಕ ಭಾರತೀಯ ಸೇನೆ ಚೀನಾಗೆ ಸಡ್ಡು ಹೊಡೆದಿದೆ. ಈ ಸೇತುವೆ ನಿರ್ಮಾಣ ವಿಚಾರ ಕೂಡ ಸಂಘರ್ಷಕ್ಕೆ ಕಾರಣವಾಗಿದ್ದು, ಚೀನಾ ಸೇತುವೆ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಇದಕ್ಕೆ ಜಗ್ಗದ ಭಾರತೀಯ ಸೇನೆ 60 ಮೀಟರ್ ಉದ್ದದ ಸೇತುವೆ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಿದೆ. ಇದರಿಂದ ಭಾರತೀಯ ಸೇನಾ ವಾಹನ, ಸರಕುಗಳನ್ನು ಸುಲಭವಾಗಿ ಸಾಗಿಸಲು ಅನುಕೂಲವಾಗುತ್ತದೆ.