
ಹಿಮಾಲಯದ ಶ್ರೇಣಿಯಲ್ಲಿ ಏಪ್ರಿಲ್ ತಿಂಗಳಲ್ಲಿ ಹಿಮಮಳೆಯಾಗುತ್ತೆ ಎಂಬ ಸುದ್ದಿಯನ್ನ ಈ ಹಿಂದೆ ಕೇಳಿದ್ದೀರಾ..? ಆದರೆ ಹಿಮಾಚಲ ಪ್ರದೇಶ ಶುಕ್ರವಾರ ಮುಂಜಾನೆ ಹಿಮಮಳೆಗೆ ಸಾಕ್ಷಿಯಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಸ್ನೋಫಾಲ್ನ ಅದ್ಭುತ ಫೋಟೋಗಳು ಹಾಗೂ ವಿಡಿಯೋಗಳು ಶೇರ್ ಆಗ್ತಿವೆ. ಶುಕ್ರವಾರ ಮುಂಜಾನೆ ಶಿಮ್ಲಾ ಜಿಲ್ಲೆಯ ಮಂಧೋಲ್ ಗ್ರಾಮದಲ್ಲಿ ಹಿಮಮಳೆ ಉಂಟಾಗಿದೆ.
ಶಿಮ್ಲಾ ಪಟ್ಟಣವು 83 ಮಿಲಿಮೀಟರ್ ಮಳೆಯನ್ನ ವರದಿ ಮಾಡಿದೆ. ಏಪ್ರಿಲ್ ತಿಂಗಳಲ್ಲಿ ಸುರಿದ ಎರಡನೇ ಅತ್ಯಧಿಕ ಪ್ರಮಾಣದ ಮಳೆ ಇದಾಗಿದೆ. ಈ ಹಿಂದೆ 1979ರಲ್ಲಿ ಶಿಮ್ಲಾದಲ್ಲಿ 24 ಗಂಟೆಗಳ ಕಾಲ ಮಳೆಯಾಗಿತ್ತು.
ಇದಾದ ಬಳಿಕ ಈ ಬಾರಿ ಶಿಮ್ಲಾದಲ್ಲಿ ಏಪ್ರಿಲ್ ತಿಂಗಳ ಅತ್ಯಧಿಕ ಪ್ರಮಾಣದ ಮಳೆಯಾಗಿದೆ ಎಂದು ಶಿಮ್ಲಾ ಹವಾಮಾನ ಇಲಾಖೆ ಕೇಂದ್ರ ನಿರ್ದೇಶಕರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಹಿಮಮಳೆಯ ಅಭೂತಪೂರ್ವ ದೃಶ್ಯಗಳನ್ನ ಶೇರ್ ಮಾಡಿದ್ದಾರೆ.

