alex Certify ರಫೇಲ್‌ ಬರುತ್ತಲೇ ‘Hows the josh’ ಎಂದ ದೇಶವಾಸಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಫೇಲ್‌ ಬರುತ್ತಲೇ ‘Hows the josh’ ಎಂದ ದೇಶವಾಸಿಗಳು

ಮೂರು ದಿನಗಳಿಂದ ಇಡೀ ದೇಶವೇ ಕಾತರದಿಂದ ಕಾಯುತ್ತಿದ್ದ ಕ್ಷಣಗಳು ಇದೀಗ ಆಗಮಿಸಿದ್ದು, ಐದು ರಫೇಲ್ ಯುದ್ಧ ವಿಮಾನಗಳು ಫ್ರಾನ್ಸ್ ‌ನಿಂದ ಭಾರತದ ಅಂಬಾಲಾ ವೈಮಾನಿಕ ನೆಲೆಗೆ ಬಂದು ಇಳಿದಿವೆ.

ದೇಶವಾಸಿಗಳ ಭಾರೀ ಸ್ವಾಗತದೊಂದಿಗೆ ಭಾರತದ ಮಣ್ಣನ್ನು ಈ ವಿಮಾನಗಳು ಸ್ಪರ್ಶಿಸುತ್ತಲೇ, ‘The birds have landed safely in Ambala,’ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಘೋಷಣೆ ಮಾಡಿದ್ದಾರೆ. ಭಾರತೀಯ ವಾಯುಪಡೆಯ ಮುಂಚೂಣಿ ಯುದ್ಧ ವಿಮಾನಗಳಾದ ಸುಖೋಯ್‌-30-MKI ಹಾಗೂ ಮಿಗ್-29ಗಳೊಂದಿಗೆ ಅತ್ಯಂತ ಸುಧಾರಿತವಾಗಿರುವ ಯುದ್ಧ ವಿಮಾನವಾಗಿ ಈ ರಫೇಲ್ ಸಹ ಸೇರಿಕೊಳ್ಳುತ್ತಿದ್ದು, ಪಡೆಗಳಿಗೆ ಆನೆಬಲ ತುಂಬಿವೆ.

ರಫೇಲ್‌ಗಳು ದೇಶಕ್ಕೆ ಬಂದಿಳಿಯುತ್ತಲೇ ಸಾರ್ವಜನಿಕರೂ ಸಹ ಬಲೇ ಖುಷಿಯಾಗಿದ್ದು, ನೆಟ್ಟಿಗರೆಲ್ಲಾ ‘Hows the josh’ ಎನ್ನುವ ಮೂಲಕ ತಮ್ಮ ಸಂಭ್ರಮ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...