ತಮ್ಮ ತಲೆಯನ್ನು ಬಳಸಿಕೊಂಡು ಒಂದೇ ಒಂದು ನಿಮಿಷದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಬಾಟಲಿ ಮುಚ್ಚಳಗಳನ್ನು ತೆಗೆಯುವ ಮೂಲಕ ಆಂಧ್ರ ಪ್ರದೇಶದ ನೆಲ್ಲೂರಿನ ವ್ಯಕ್ತಿಯೊಬ್ಬರು ಗಿನ್ನೆಸ್ ದಾಖಲೆ ಪುಸ್ತಕ ಸೇರಿದ್ದಾರೆ.
ಭಾರತೀಯ ಸಮರಕಲೆಯ ತಜ್ಞ ಪ್ರಭಾಕರ ರೆಡ್ಡಿ ಒಂದೇ ನಿಮಿಷದ ಒಳಗೆ 68 ಬಾಟಲಿಗಳ ಮುಚ್ಚಳಗಳನ್ನು ತೆರೆದಿದ್ದಾರೆ. ಇದೇ ವೇಳೆ ಅವರಿಗೆ ಸುಜಿತ್ ಕುಮಾರ್ ಹಾಗೂ ರಾಕೇಶ್ ನೆರವಿಗೆ ನಿಂತಿದ್ದಾರೆ.
ಈ ಹಿಂದೆ ಪಾಕಿಸ್ತಾನದ ಮುಹಮ್ಮದ್ ರಶೀದ್ ನಸೀಮ್ ಹೆಸರಿನ ವ್ಯಕ್ತಿಯೊಬ್ಬರು ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದಾರೆ.