alex Certify ವೈದ್ಯೆ ಸ್ವಾಗತದ ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಮೋದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈದ್ಯೆ ಸ್ವಾಗತದ ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಮೋದಿ

ನವದೆಹಲಿ: ಕೋವಿಡ್-19 ಕರ್ತವ್ಯ ಮುಗಿಸಿ ಮನೆಗೆ ವಾಪಸಾದ ವೈದ್ಯೆಯನ್ನು ಆಕೆಯ ಮನೆಯವರು
ಹಾಗೂ ಸುತ್ತಲಿನ ಜನ ಸ್ವಾಗತಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ದೀಪಕ್ ಮಲ್ಹೊತ್ರಾ ಎಂಬುವವರು ಮಾಡಿದ ಟ್ವೀಟನ್ನು ಪ್ರಧಾನಿ ನರೇಂದ್ರ ಮೋದಿ ರಿ-ಟ್ವೀಟ್ ಮಾಡಿದ್ದು. “ಇಂಥ ಸನ್ನಿವೇಶಗಳು ಹೃದಯದಲ್ಲಿ ಖುಷಿಯನ್ನು ಹೆಚ್ಚಿಸುತ್ತವೆ- ದಿಸ್ ಈಸ್ ಸ್ಪಿರಿಟ್ ಆಫ್ ಇಂಡಿಯಾ” ಎಂದು ಬರೆದಿದ್ದಾರೆ.

ಕರೋನಾ ರೋಗಿಗಳಿದ್ದ ಐಸಿಯುನಲ್ಲಿ ನಿರಂತರ 20 ದಿನ ಕಾರ್ಯ ನಿರ್ವಹಿಸಿದ ನಂತರ ವೈದ್ಯೆ ಮನೆಗೆ ಬರುತ್ತಿದ್ದಂತೆ ಮನೆಯವರು ಹಾಗೂ ಸುತ್ತಲಿನ ಜನ ಚಪ್ಪಾಳೆ ತಟ್ಟಿ, ಆಕೆಯ ಮೇಲೆ ಪುಷ್ಪ ವೃಷ್ಟಿ ಮಾಡಿ ಅಭಿನಂದನೆ ಸಲ್ಲಿಸುತ್ತಾರೆ. ಇದನ್ನು ನೋಡಿ ವೈದ್ಯೆ ಅಚ್ಚರಿಗೊಂಡು ಕಣ್ಣೀರೊರೆಸಿಕೊಳ್ಳುವ ಮನಮುಟ್ಟುವ ವಿಡಿಯೋ ಇದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...