ದೇಶದಲ್ಲಿ ಕೋವಿಡ್ನಿಂದ ಬಳಲುತ್ತಿರುವ ಸೋಂಕಿತರ ಚಿಕಿತ್ಸೆಗಾಗಿ ವೈದ್ಯಕೀಯ ವಿಭಾಗದ ವಿದ್ಯಾರ್ಥಿಗಳನ್ನೂ ಬಳಸಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಉನ್ನತ ಮಟ್ಟದ ಸಭೆಯಲ್ಲಿ ಈ ವಿಚಾರವಾಗಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಂಟರ್ನ್ಶಿಪ್ ಹಂತದಲ್ಲಿರುವ ವೈದ್ಯಕೀಯ ವಿದ್ಯಾರ್ಥಿಗಳನ್ನ ಕೋವಿಡ್ ರೋಗಿಗಳ ಚಿಕಿತ್ಸೆಗೆ ಬಳಸಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ.
ಎಂಬಿಬಿಎಸ್ ಅಂತಿಮ ಹಂತದಲ್ಲಿರುವ ವಿದ್ಯಾರ್ಥಿಗಳು ಇನ್ಮೇಲೆ ಸೌಮ್ಯ ಲಕ್ಷಣಗಳನ್ನ ಹೊಂದಿರುಸ ಸೋಂಕಿತರನ್ನ ಟೆಲಿ ಸಂದರ್ಶನದ ಮೂಲಕ ತಪಾಸಣೆ ನಡೆಸಲಿದ್ದಾರೆ. ಸದ್ಯ ಕೋವಿಡ್ ಡ್ಯೂಟಿಯಲ್ಲಿ ಹಗಲಿರುಳು ಶ್ರಮಿಸ್ತಾ ಇರುವ ವೈದ್ಯರಿಗೆ ಕೊಂಚ ರಿಲೀಫ್ ನೀಡುವ ಸಲುವಾಗಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.
ಇದು ಮಾತ್ರವಲ್ಲದೇ ಸರ್ಕಾರ ಕನಿಷ್ಟ ನಾಲ್ಕು ತಿಂಗಳವರೆಗೆ ನೀಟ್ – ಪಿಜಿ ಪರೀಕ್ಷೆಯನ್ನ ಮುಂದೂಡಲು ನಿರ್ಧರಿಸಿದೆ. ಅಂದರೆ ಆಗಸ್ಟ್ 31ರ ಒಳಗಾಗಿ ಈ ಪರೀಕ್ಷೆಗಳು ನಡೆಯೋದಿಲ್ಲ. ಪರೀಕ್ಷೆ ನಡೆಯುವ ಒಂದು ತಿಂಗಳ ಮೊದಲೇ ವಿದ್ಯಾರ್ಥಿಗಳಿಗೆ ದಿನಾಂಕವನ್ನ ಪ್ರಕಟಿಸಲಾಗುವುದು ಎಂದೂ ಹೇಳಿದೆ. ಈ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರು ಇನ್ಮೇಲೆ ಕೋವಿಡ್ ರೋಗಿಗಳ ಚಿಕಿತ್ಸೆಗೆ ಸಿಗಲಿದ್ದಾರೆ ಎಂದು ಸರ್ಕಾರ ಹೇಳಿದೆ.