ಖಾದಿಯಿಂದ ತಯಾರಿಸಲಾದ ಮುಜೀಬ್ ಜಾಕೆಟ್ ಪ್ರಧಾನಿ ನರೇಂದ್ರ ಮೋದಿಯವರ ಮುಂದಿನ ವಾರದ 2 ದಿನಗಳ ಢಾಕಾ ಪ್ರವಾಸದ ಆಕರ್ಷಣೆಯ ಕೇಂದ್ರವಾಗಿರಲಿದೆ. ಬಾಂಗ್ಲಾದೇಶದ ಫಾದರ್ ಆಫ್ ನೇಷನ್ ಶೇಖ್ ಮುಜೀಬುರ್ ರಹಮಾನ್ರ ಸಿಗ್ನೇಚರ್ ಸ್ಟೈಲ್ ಆಗಿದ್ದ ಮುಜೀಬ್ ಜಾಕೆಟ್ನ್ನು ಪ್ರಧಾನಿ ತೊಡಲಿದ್ದಾರೆ.
ಖಾದಿ ಹಾಗೂ ಗ್ರಾಮೋದ್ಯೋಗ ಆಯೋಗ, ಇದನ್ನು ಡಿಸೈನ್ ಮಾಡಿಕೊಟ್ಟಿದೆ. ಕೆವಿಐಸಿಯ ಅಧ್ಯಕ್ಷ ವಿನಯ್ ಕುಮಾರ್ ಸಕ್ಸೇನಾ ಈ ವಿಚಾರವಾಗಿ ಮಾತನಾಡಿ ಮಾರ್ಚ್ 26 ಹಾಗೂ 27ರಂದು ಪ್ರಧಾನಿ ಮೋದಿ ಢಾಕಾ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಈ ವಿಶೇಷ ವಿನ್ಯಾಸದ ಜಾಕೆಟ್ ಧರಿಸಲಿದ್ದಾರೆ ಎಂದರು.
ವಿಶೇಷ ರೂಪದಲ್ಲಿ ಡಿಸೈನ್ ಮಾಡಲಾದ ಮುಜೀಬ್ ಜಾಕೆಟ್ ಉತ್ತಮ ಗುಣಮಟ್ಟದ ಖಾದಿ ಬಟ್ಟೆಯಿಂದ ಮಾಡಲಾಗಿದೆ. ಕಪ್ಪು ಬಣ್ಣದ ಮುಜೀಬ್ ಜಾಕೆಟ್ನಲ್ಲಿ ಆರು ಬಟನ್, 2 ಜೇಬು ಹಾಗೂ ಎಡಭಾಗದಲ್ಲಿ ಮುಂಭಾಗದ ಪಾಕೆಟ್ ಇದ್ದು ಇದನ್ನ ವಿಶೇಷ ರೂಪದಲ್ಲಿ ವಿನ್ಯಾಸಗೊಳಿಸಲಾಗಿದೆ. ಮುಜೀಬ್ ಜಾಕೆಟ್ ಬಾಂಗ್ಲಾದೇಶದಲ್ಲಿ ಐತಿಹಾಸಿಕ ರೂಪದಲ್ಲಿ ಮಹತ್ವಪೂರ್ಣ ಸ್ಥಾನವನ್ನ ಪಡೆದಿದೆ. ಪ್ರಧಾನ ಮಂತ್ರಿ ಮೋದಿಯವರ ಬಾಂಗ್ಲಾದೇಶದ ಪ್ರವಾಸ ಪ್ರಯುಕ್ತ ಈ ವಿಶೇಷ ಉಡುಪನ್ನ ತಯಾರಿಸಲಾಗಿದೆ.