alex Certify ಬಿಗ್ ನ್ಯೂಸ್: ಪ್ರಧಾನಿಗೆ ಜೀವ ಬೆದರಿಕೆ – ಕಿಲ್ ನರೇಂದ್ರ ಮೋದಿ ಸಂದೇಶ ರವಾನೆ, ಭಾರಿ ಭದ್ರತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್ ನ್ಯೂಸ್: ಪ್ರಧಾನಿಗೆ ಜೀವ ಬೆದರಿಕೆ – ಕಿಲ್ ನರೇಂದ್ರ ಮೋದಿ ಸಂದೇಶ ರವಾನೆ, ಭಾರಿ ಭದ್ರತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ಜೀವಬೆದರಿಕೆ ಬಂದಿದ್ದು ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಅತ್ಯಂತ ಹೆಚ್ಚಿನ ಭದ್ರತೆ ಹೊಂದಿರುವ ಮೋದಿ ಅವರಿಗೆ ಜೀವಬೆದರಿಕೆಯೊಡ್ಡಿರುವ ಇ -ಮೇಲ್ ರಾಷ್ಟ್ರೀಯ ತನಿಖಾ ದಳಕ್ಕೆ ಲಭ್ಯವಾಗಿದೆ.

ಇ –ಮೇಲ್ ನಲ್ಲಿ ‘ಕಿಲ್ ನರೇಂದ್ರ ಮೋದಿ’ ಎಂಬ ಶಬ್ದಗಳನ್ನು ಬರೆಯಲಾಗಿದ್ದು ಆಗಸ್ಟ್ 8 ರಂದು ಬೆಳಗಿನ ಜಾವ 1.34 ರ ಸುಮಾರಿಗೆ ಇ-ಮೇಲ್ ಕಳುಹಿಸಲಾಗಿದೆ. ಈ ಕುರಿತಾದ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ರಾಷ್ಟ್ರೀಯ ತನಿಖಾದಳ ಗೃಹ ಸಚಿವಾಲಯಕ್ಕೆ ಅಗತ್ಯ ಕ್ರಮಕೈಗೊಳ್ಳಲು ತಿಳಿಸಿದ್ದು ಮೋದಿಯವರ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

ಪ್ರಧಾನಿಗೆ ಬೆದರಿಕೆ ಬಂದಿರುವ ವಿಚಾರ ಭಾರಿ ಸಂಚಲನಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...