ನಾಸಿಕ್ ಮೂಲದ 34 ವರ್ಷದ ಕವಿತಾ ಭೋಂಡ್ವೆ ಎಂಬವರು ತಮ್ಮ ಅಂಗವೈಕಲ್ಯದ ಹೊರತಾಗಿಯೂ ಎರಡು ಗ್ರಾಮಗಳ ಸರಪಂಚ್ ಆಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ತಮ್ಮ 25ನೇ ವಯಸ್ಸಿನಲ್ಲೇ ದಿಂಡೋರಿ ಹಾಗೂ ದಹೇಂಗಾವ್ ಜಿಲ್ಲೆಯ ಸರಪಂಚ್ ಆಗಿದ್ದರು. ಇದೀಗ ತಮ್ಮ ಎರಡನೇ ಅವಧಿಯ ಆಡಳಿತವನ್ನ ಅವರು ನಡೆಸುತ್ತಿದ್ದಾರೆ.
ಅಂಗವೈಕಲ್ಯದ ಸಮಸ್ಯೆ ಕವಿತಾರ ಅಭಿವೃದ್ಧಿಗೆ ಅಡ್ಡಿಯಾಗೋಕೆ ಅವರು ಬಿಡಲಿಲ್ಲ. ಸಾಮಾಜಿಕ ಒತ್ತಡ, ದೈಹಿಕ ನ್ಯೂನ್ಯತೆ ಈ ಎಲ್ಲ ಸಮಸ್ಯೆಗಳನ್ನ ಮೆಟ್ಟಿ ನಿಂತ ಕವಿತಾ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಕುಡಿಯುವ ನೀರು, ಗ್ರಾಮಗಳಿಗರ ರಸ್ತೆ, ನಿರಾಶ್ರಿತರಿಗೆ ಮನೆ ಸೇರಿದಂತೆ ಹಲವು ಸೌಕರ್ಯಗಳನ್ನ ಒದಗಿಸಿಕೊಟ್ಟಿದ್ದಾರೆ.
ನನ್ನ ದೇಹ ನ್ಯೂನತೆ ನೋಡಿ ನಕ್ಕವರು ಅನೇಕರು. ಈ ರೀತಿಯ ದೇಹವನ್ನಿಟ್ಟುಕ್ಕೊಂಡು ಹೇಗೆ ಗ್ರಾಮದ ಜವಾಬ್ದಾರಿ ವಹಿಸಿಕೊಳ್ತಾರೆ ಅಂತಾ ಅನೇಕರು ಪ್ರಶ್ನೆ ಮಾಡಿದ್ದರು. ಆದರೆ ನಾನು ಇಂತಹ ಮಾತುಗಳಿಂದ ಕುಗ್ಗಲಿಲ್ಲ. ನನ್ನ ಕುಟುಂಬದ ಬೆಂಬಲದಿಂದ ನಾನು ಈ ಮಟ್ಟಕ್ಕೆ ಬೆಳೆದು ನಿಂತಿದ್ದೇನೆ ಅಂತಾ ಕವಿತಾ ಹೇಳಿದ್ದಾರೆ.