ಕೊರೊನಾ ಎರಡನೆ ಅಲೆಯಿಂದಾಗಿ ಇಡೀ ದೇಶವೇ ಜೀವನ ನಿರ್ವಹಣೆಗಾಗಿ ಹೋರಾಡುತ್ತಿದೆ. ಒಂದೊತ್ತಿನ ಊಟಕ್ಕೂ ಎಷ್ಟೋ ಕುಟುಂಬಗಳಿಗೆ ಸಂಕಷ್ಟವಿದೆ. ಈ ನಡುವೆ ಬೀದಿ ನಾಯಿಗಳ ಪಾಡಂತೂ ಕೇಳೋದೇ ಬೇಡ. ಮಹಾರಾಷ್ಟ್ರದ ನಾಗ್ಪುರದಲ್ಲಿ ಮಹಾನುಭಾವರೊಬ್ಬರು 190 ಬೀದಿನಾಯಿಗಳಿಗೆ ನಿತ್ಯ ಚಿಕನ್ ಬಿರಿಯಾನಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ರಂಜಿತ್ ನಾತ್ ನಿತ್ಯ 40 ಕೆಜಿ ಚಿಕನ್ ಬಿರಿಯಾನಿಯನ್ನ ತಯಾರು ಮಾಡ್ತಾರೆ. ಕೊರೊನಾ ವೈರಸ್ ಸಾಂಕ್ರಾಮಿಕ ಆರಂಭವಾದಾಗಿನಿಂದ ರಂಜಿತ್ 190ಕ್ಕೂ ಅಧಿಕ ಬೀದಿ ನಾಯಿಗಳಿಗೆ ಊಟವನ್ನ ನೀಡುತ್ತಾ ಬಂದಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ರಂಜಿತ್, ನಾನು ಬುಧವಾರ, ರವಿವಾರ ಹಾಗೂ ಶುಕ್ರವಾರ 30-40 ಕೆಜಿ ಬಿರಿಯಾನಿ ತಯಾರು ಮಾಡೋದ್ರಲ್ಲೇ ಬ್ಯುಸಿಯಾಗಿಬಿಡ್ತೇನೆ. ಈ ಶ್ವಾನಗಳೆಲ್ಲ ನನ್ನ ಮಕ್ಕಳಂತೆ ಭಾಸವಾಗುತ್ತೆ. ನಾನು ಜೀವಂತ ಇರುವವರೆಗೂ ಈ ಕೆಲಸವನ್ನ ಮಾಡುತ್ತೇನೆ. ಈ ಕೆಲಸ ನನಗೆ ಖುಷಿ ಕೊಡ್ತಿದೆ ಎಂದು ಹೇಳಿದ್ರು.
ಮಧ್ಯಾಹ್ನದ ವೇಳೆಗೆ ಚಿಕನ್ ಬಿರಿಯಾನಿ ಮಾಡಲು ಆರಂಭಿಸುವ ರಂಜಿತ್ ಸಂಜೆ 5 ಗಂಟೆ ಸುಮಾರಿಗೆ ಶ್ವಾನಗಳಿಗೆ ಅದನ್ನ ಉಣಬಡಿಸುತ್ತಾರೆ. ಈ ಚಿಕನ್ ಬಿರಿಯಾನಿಯಲ್ಲಿ ಮಾಂಸಕ್ಕಿಂತ ಮೂಳೆಗಳು ಹೆಚ್ಚಾಗಿ ಇರುತ್ತದೆ. ಮೂಳೆಯು ಕಡಿಮೆ ದರಕ್ಕೆ ಸಿಗೋದ್ರಿಂದ ಅದರಲ್ಲೇ ರಂಜಿತ್ ಚಿಕನ್ ಬಿರಿಯಾನಿ ತಯಾರಿಸುತ್ತಾರೆ.