
ತಮ್ಮೂರಿನ ಪರಿಸರದ ಕಿರುಚಿತ್ರವನ್ನೇ ಮರದ ಕಲಾಕೃತಿಯಲ್ಲಿ ಮೂಡಿಸಿರುವ ನಾಗಾಲ್ಯಾಂಡ್‌ನ ಶಿಲ್ಪಿಯೊಬ್ಬರು ನೆಟ್ಟಿಗರ ಹೃದಯ ಗೆಲ್ಲುತ್ತಿದ್ದಾರೆ.
ಈಶಾನ್ಯ ರಾಜ್ಯದ ಉಖ್ರುಲ್ ಜಿಲ್ಲೆಯ ತಮ್ಮ ಗ್ರಾಮದ ಸೌಂದರ್ಯವನ್ನು ಕಲಾಕೃತಿಯ ರೂಪದಲ್ಲಿ ಕಟ್ಟಿಕೊಟ್ಟಿರುವ ನಿಂಗ್‌ವೋನ್ ಝಿಂಗ್‌ಖಾಯ್, ಯಾರಾದರೂ ಮುಂದೆ ಬಂದು ತಮ್ಮ ಈ ವರ್ಕ್ ಅನ್ನು ಖರೀದಿ ಮಾಡುತ್ತಾರೆಯೇ ಎಂದು ಕಾಯುತ್ತಿದ್ದಾರೆ.
ಮರದಲ್ಲಿ ಕೆತ್ತಲಾದ ಈ ಕಲಾಕೃತಿಯು ಜಲಪಾತ, ಸೇತುವೆ ಹಾಗೂ ಗುಡಿಸಲುಗಳನ್ನು ಒಳಗೊಂದು ಗ್ರಾಮದ ಚಿತ್ರಣವನ್ನು ಕೊಡುತ್ತಿದೆ. .ಈ ಕೆತ್ತನೆಗೆ 1.7 ಲಕ್ಷ ರೂ.ಗಳು ತಗುಲಿವೆ ಎಂದು ಝಿಂಗ್‌ಖಾಯ್ ತಿಳಿಸಿದ್ದಾರೆ.