
ಮುಂಬೈ ಮೂಲದ ಸಾಮಾಜಿಕ ಕಾರ್ಯಕರ್ತೆ ನಾಜ್ ಪಟೇಲ್ ಎಂಬವರು ಕಳೆದ ವರ್ಷ ಡಿಸೆಂಬರ್ನಲ್ಲಿ ಮಿಂತ್ರಾ ಲೋಗೋದಲ್ಲಿ ಹೆಣ್ಣುಮಕ್ಕಳನ್ನ ಅಸಹ್ಯವಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿದ್ದರು.
ಈ ಸಂಬಂಧ ಮುಂಬೈ ಸೈಬರ್ ಕ್ರೈಂ ವಿಭಾಗ ಮಿಂತ್ರಾಗೆ ಇ ಮೇಲ್ ಮಾಡಿತ್ತು. ಈ ಇಮೇಲ್ಗೆ ಸಕಾರಾತ್ಮಕವಾಗೇ ಸ್ಪಂದಿಸಿದ ಮಿಂತ್ರಾ ತನ್ನ ಲೋಗೋದಲ್ಲಿ ಸಣ್ಣ ಬದಲಾವಣೆ ಮಾಡಿದೆ. ಆದರೆ ಈ ವಿಚಾರವನ್ನ ನೆಟ್ಟಿಗರು ಇಷ್ಟಕ್ಕೇ ಬಿಟ್ಟಿಲ್ಲ. ಈ ಸುದ್ದಿ ಟ್ರೆಂಡ್ ಆದಾಗಿನಿಂದ ಟ್ರೋಲ್ಗಳ ಮೇಲೆ ಟ್ರೋಲ್ ಮಾಡುತ್ತಿದ್ದಾರೆ.
ಅನೇಕರು ಸಾಮಾಜಿಕ ಕಾರ್ಯಕರ್ತೆ ಎಲ್ಲರ ಗಮನವನ್ನ ಪಡೆಯಬೇಕು ಅಂತಾ ಈ ನಾಟಕ ಮಾಡಿದ್ದಾಳೆ ಎಂದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸಾಮಾನ್ಯ ಜನರು ಮಾತ್ರವಲ್ಲದೇ ಸ್ವಿಗ್ಗಿ ಹಾಗೂ ಜೊಮೆಟೋ ಕೂಡ ಈ ಟ್ರೋಲ್ ಹಬ್ಬದಲ್ಲಿ ಭಾಗಿಯಾಗಿವೆ,