alex Certify ಬೆರಗಾಗಿಸುತ್ತೆ‌ ವಧುದಕ್ಷಿಣೆ ರೂಪದಲ್ಲಿ ಯುವತಿ ಇಟ್ಟ ಡಿಮ್ಯಾಂಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ‌ ವಧುದಕ್ಷಿಣೆ ರೂಪದಲ್ಲಿ ಯುವತಿ ಇಟ್ಟ ಡಿಮ್ಯಾಂಡ್

ಮುಸ್ಲಿಂ ಸಂಪ್ರದಾಯದಲ್ಲಿ ವರ ವಧುವಿಗೆ ವಧು ದಕ್ಷಿಣೆ ನೀಡುವ ಸಂಪ್ರದಾಯವಿದೆ. ಇದಕ್ಕೆ ಮೆಹರ್​ ಎಂದು ಕರೆಯಲಾಗುತ್ತೆ. ಪಶ್ಚಿಮ ಬಂಗಾಳದಲ್ಲಿ ನಡೆದ ಮುಸ್ಲಿಂ ವಿವಾಹವೊಂದರಲ್ಲಿ ವಧು ಮೆಹರ್​ ರೂಪದಲ್ಲಿ 60 ಪುಸ್ತಕಗಳಿಗೆ ಬೇಡಿಕೆ ಇಡುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾಳೆ. 24 ವರ್ಷದ ಮೋಯ್ನಾ ಖಾತುನ್​ ಮುರ್ಷಿಬಾದ್​ನ ನಿವಾಸಿಯಾಗಿದ್ದಾಳೆ.

ಈಕೆ ಕಲ್ಯಾಣಿ ವಿಶ್ವವಿದ್ಯಾಲಯದಲ್ಲಿ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದಾಳೆ. ಈಕೆ 24 ವರ್ಷದ ಭೂಗೋಳ ಶಾಸ್ತ್ರ ಪದವೀಧರ ಮಿಝಾನುರ್​​ ರೆಹಮಾನ್​ ಜೊತೆ ಸೋಮವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾಳೆ.

ಒಮ್ಮೆ 50 ಸಾವಿರ ರೂ. ವೆಚ್ಚ ಮಾಡಿ 10 ವರ್ಷ ಗಳಿಸಿ ಇಷ್ಟೊಂದು ಹಣ

ಇದೊಂದು ಅರೆಂಜ್​ ಮ್ಯಾರೇಜ್​ ಆಗಿದ್ದು, ಈಕೆ ಮೊದಲೇ ತನ್ನ ಪೋಷಕರ ಬಳಿ ತಾನು ಮೆಹರ್​​ ರೂಪದಲ್ಲಿ ಪುಸ್ತಕಗಳನ್ನ ಕೇಳಲಿದ್ದೇನೆ ಎಂದು ಹೇಳಿದ್ದಳು.

ಆಕೆಗೆ ಸಾಂಪ್ರದಾಯಿಕ ವಧುದಕ್ಷಿಣೆಯಲ್ಲಿ ಯಾವುದೇ ಆಸಕ್ತಿ ಇರಲಿಲ್ಲ. ಈಗೆಲ್ಲ ಮೊಹರ್​ ರೂಪದಲ್ಲಿ 50 ಸಾವಿರ ರೂಪಾಯಿ ಕೊಡಲಾಗುತ್ತೆ. ಮೊದಲು ಈಕೆಯ ಬೇಡಿಕೆ ಕೇಳಿ ಪೋಷಕರಿಗೆ ಶಾಕ್​ ಆಗಿತ್ತು. ಆದರೆ ವರನ ಕುಟುಂಬಸ್ಥರು ಮಾತ್ರ ಖುಷಿಯಿಂದಲೇ ಮೊಯ್ನಾ ಬೇಡಿಕೆಯನ್ನ ಈಡೇರಿಸಲು ಒಪ್ಪಿದ್ದಾರೆ ಎಂದು ಮೊಯ್ನಾ ಕುಟುಂಬಸ್ಥರು ಹೇಳಿದ್ದಾರೆ. ಮೊಯ್ನಾ 60 ಪುಸ್ತಕಗಳನ್ನ ಕೇಳಿದ್ರೆ ಆಕೆಯ ಗಂಡನ ಮನೆಯವರು ಅದಕ್ಕಿಂತಲೂ ಹೆಚ್ಚಿನ ಪುಸ್ತಕಗಳನ್ನ ಆಕೆಗೆ ಕೊಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...