ಮುಸ್ಲಿಂ ಸಂಪ್ರದಾಯದಲ್ಲಿ ವರ ವಧುವಿಗೆ ವಧು ದಕ್ಷಿಣೆ ನೀಡುವ ಸಂಪ್ರದಾಯವಿದೆ. ಇದಕ್ಕೆ ಮೆಹರ್ ಎಂದು ಕರೆಯಲಾಗುತ್ತೆ. ಪಶ್ಚಿಮ ಬಂಗಾಳದಲ್ಲಿ ನಡೆದ ಮುಸ್ಲಿಂ ವಿವಾಹವೊಂದರಲ್ಲಿ ವಧು ಮೆಹರ್ ರೂಪದಲ್ಲಿ 60 ಪುಸ್ತಕಗಳಿಗೆ ಬೇಡಿಕೆ ಇಡುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾಳೆ. 24 ವರ್ಷದ ಮೋಯ್ನಾ ಖಾತುನ್ ಮುರ್ಷಿಬಾದ್ನ ನಿವಾಸಿಯಾಗಿದ್ದಾಳೆ.
ಈಕೆ ಕಲ್ಯಾಣಿ ವಿಶ್ವವಿದ್ಯಾಲಯದಲ್ಲಿ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದಾಳೆ. ಈಕೆ 24 ವರ್ಷದ ಭೂಗೋಳ ಶಾಸ್ತ್ರ ಪದವೀಧರ ಮಿಝಾನುರ್ ರೆಹಮಾನ್ ಜೊತೆ ಸೋಮವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾಳೆ.
ಒಮ್ಮೆ 50 ಸಾವಿರ ರೂ. ವೆಚ್ಚ ಮಾಡಿ 10 ವರ್ಷ ಗಳಿಸಿ ಇಷ್ಟೊಂದು ಹಣ
ಇದೊಂದು ಅರೆಂಜ್ ಮ್ಯಾರೇಜ್ ಆಗಿದ್ದು, ಈಕೆ ಮೊದಲೇ ತನ್ನ ಪೋಷಕರ ಬಳಿ ತಾನು ಮೆಹರ್ ರೂಪದಲ್ಲಿ ಪುಸ್ತಕಗಳನ್ನ ಕೇಳಲಿದ್ದೇನೆ ಎಂದು ಹೇಳಿದ್ದಳು.
ಆಕೆಗೆ ಸಾಂಪ್ರದಾಯಿಕ ವಧುದಕ್ಷಿಣೆಯಲ್ಲಿ ಯಾವುದೇ ಆಸಕ್ತಿ ಇರಲಿಲ್ಲ. ಈಗೆಲ್ಲ ಮೊಹರ್ ರೂಪದಲ್ಲಿ 50 ಸಾವಿರ ರೂಪಾಯಿ ಕೊಡಲಾಗುತ್ತೆ. ಮೊದಲು ಈಕೆಯ ಬೇಡಿಕೆ ಕೇಳಿ ಪೋಷಕರಿಗೆ ಶಾಕ್ ಆಗಿತ್ತು. ಆದರೆ ವರನ ಕುಟುಂಬಸ್ಥರು ಮಾತ್ರ ಖುಷಿಯಿಂದಲೇ ಮೊಯ್ನಾ ಬೇಡಿಕೆಯನ್ನ ಈಡೇರಿಸಲು ಒಪ್ಪಿದ್ದಾರೆ ಎಂದು ಮೊಯ್ನಾ ಕುಟುಂಬಸ್ಥರು ಹೇಳಿದ್ದಾರೆ. ಮೊಯ್ನಾ 60 ಪುಸ್ತಕಗಳನ್ನ ಕೇಳಿದ್ರೆ ಆಕೆಯ ಗಂಡನ ಮನೆಯವರು ಅದಕ್ಕಿಂತಲೂ ಹೆಚ್ಚಿನ ಪುಸ್ತಕಗಳನ್ನ ಆಕೆಗೆ ಕೊಡಿಸಿದ್ದಾರೆ.