ಖಾಸಗಿ ಕಾರಿನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಮಾಸ್ಕ್ ಧರಿಸದೇ ಇದ್ದರೂ ದಂಡ ವಿಧಿಸದಂತೆ ಮುಂಬೈ ಮುನ್ಸಿಪಾಲ್ ಕಮಿಷನರ್ ಸೂಚನೆ ನೀಡಿದ್ದಾರೆ.
ಆದರೆ ಈ ವಿನಾಯಿತಿ ಕೇವಲ ಕಾರಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮಾತ್ರ ಇರಲಿದೆ. ಆದರೆ ಸಾರ್ವಜನಿಕ ವಾಹನಗಳಲ್ಲಿ ತೆರಳುವ ಪ್ರಯಾಣಿಕರಿಗೆ ಮಾತ್ರ ಫೇಸ್ ಮಾಸ್ಕ್ ಧರಿಸೋದು ಕಡ್ಡಾಯವಾಗಿರಲಿದೆ. ಎಲ್ಲಾ ಮಾರ್ಷಲ್ಗಳು ಈ ಸೂಚನೆಯನ್ನ ಅನುಸರಿಸಬೇಕು ಎಂದು ಬಿಎಂಸಿ ಹೇಳಿದೆ.
ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಬಿಎಂಸಿ ಮುಂಬೈನಲ್ಲಿ ಕಳೆದ ವರ್ಷದ ಏಪ್ರಿಲ್ನಿಂದ ಮಾಸ್ಕ್ ಧರಿಸೋದನ್ನ ಕಡ್ಡಾಯಗೊಳಿಸಿದೆ. ಏಪ್ರಿಲ್ನಿಂದ ನವೆಂಬರ್ 28 ರವರೆಗೆ ಮಾಸ್ಕ್ ಧರಿಸದ ಕಾರಣಕ್ಕೆ ಸಾರ್ವಜನಿಕರಿಂದ ಸಂಗ್ರಹಿಸಲಾದ ದಂಡದ ಮೊತ್ತ 63.39 ಲಕ್ಷ ರೂಪಾಯಿ ಎಂದು ಬಿಎಂಸಿ ಅಧಿಕಾರಿಗಳು ಹೇಳಿದ್ದಾರೆ.