ಪರಸ್ಪರ ಪ್ರೇಮಿಸಿಕೊಳ್ಳೋದು ಜಗತ್ತಿನ ಅತೀ ಸುಂದರವಾದ ಸಂಬಂಧಗಳಲ್ಲಿ ಒಂದು ಎಂದು ಹೇಳಲಾಗುತ್ತೆ. ಆದರೆ ಮುಂಬೈನ ಯುವತಿಯೊಬ್ಬಳಿಗೆ ಆಕೆಯ ಪ್ರೀತಿ ಭಾರೀ ನಷ್ಟವನ್ನ ತಂದೊಡ್ಡಿದೆ.
ಬಾಯ್ ಫ್ರೆಂಡ್ನ ನಂಬಿ ಮನೆಯ ಇನ್ನೊಂದು ಕೀಯನ್ನ ಆತನಿಗೆ ನೀಡಿದ್ರೆ ಪುಣ್ಯಾತ್ಮ ಸರಿಯಾದ ಸಮಯ ನೋಡಿಕೊಂಡು ಆಕೆಯ ಮನೆಯಿಂದ ಬರೋಬ್ಬರಿ 13 ಲಕ್ಷ ಮೌಲ್ಯದ ವಸ್ತುಗಳನ್ನ ದೋಚಿ ಎಸ್ಕೇಪ್ ಆಗಿದ್ದಾನೆ.
ಪ್ರಿಯತಮೆ ಕುಟುಂಬಸ್ಥರ ಜೊತೆ ಟ್ರಿಪ್ಗೆ ಹೋಗಿದ್ದ ವೇಳೆ ಬಾಯ್ಪ್ರೆಂಡ್ ಈ ಐನಾತಿ ಕೆಲಸ ಮಾಡಿದ್ದಾನೆ. ಯುವತಿ ಮನೆಯವರು ಫ್ಯಾಮಿಟಿ ಟೂರ್ ಪ್ಲಾನ್ ಮಾಡಿದ್ದರು. ಆದರೆ ಆಕೆ ತನ್ನ ಲವರ್ ಜೊತೆ ಸಮಯ ಕಳೆಯಬಹುದು ಅಂತಾ ಟ್ರಿಪ್ಗೆ ಬರಲ್ಲ ಎಂದು ಹೇಳಿದ್ದಾಳೆ.
ಆದರೆ ಆಕೆಯನ್ನ ಒಂಟಿಯಾಗಿ ಮನೆಯಲ್ಲಿ ಬಿಟ್ಟು ಹೋಗಲು ಇಚ್ಚಿಸದ ಆಕೆಯ ತಂದೆ ಕೊನೆಗೂ ಅವಳನ್ನ ಟ್ರಿಪ್ಗೆ ಕರೆದೊಯ್ದಿದ್ದಾರೆ. ಇದೇ ಸಮಯವನ್ನ ಬಳಸಿಕೊಂಡ ಆರೋಪಿ ಈ ಕೃತ್ಯ ಎಸಗಿದ್ದಾನೆ.
ಈತ ಮನೆಯ ಡೂಪ್ಲಿಕೇಟ್ ಕೀಗಳನ್ನ ಬಳಸಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಜನವರಿ 27ರಂದು ಆಕೆ ಕುಟುಂಬಸ್ಥರ ಜೊತೆಗೆ ಮನೆಗೆ ವಾಪಸ್ಸಾಗುತ್ತಿದ್ದಂತೆಯೇ ಕಳ್ಳತನ ಬೆಳಕಿಗೆ ಬಂದಿದೆ. ಈ ಸಂಬಂಧ ಕೊಲಾಬಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತನಿಖೆಯ ವೇಳೆ ಪೋಷಕರು ಮಗಳ ಮೇಲೆಯೇ ಅನುಮಾನಪಟ್ಟಿದ್ದಾರೆ. ಆಕೆ ಟೂರ್ಗೆ ಬರಲು ಒಪ್ಪದಿರೋದೇ ಈ ಕಾರಣಕ್ಕೆ ಎಂದು ತಿಳಿದಿದ್ರು. ಆದರೆ ಯುವತಿಯನ್ನ ವಿಚಾರಣೆ ನಡೆಸಿದ ವೇಳೆ ಆಕೆ ಡುಪ್ಲಿಕೇಟ್ ಕೀಯನ್ನ ತನ್ನ ಪ್ರಿಯತಮನಿಗೆ ನೀಡಿರೋದಾಗಿ ಹೇಳಿದ್ದಾಳೆ.