alex Certify ಕೊರೊನಾ 2 ನೇ ಅಲೆಯಲ್ಲೂ ಗೆಲುವು ಸಾಧಿಸಿದ ʼಧಾರಾವಿʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ 2 ನೇ ಅಲೆಯಲ್ಲೂ ಗೆಲುವು ಸಾಧಿಸಿದ ʼಧಾರಾವಿʼ

Dharavi Mumbai | Mumbai's Dharavi does it again; with just 3 new cases, Asia's largest slum on way to win war against COVID-19 | Mumbai News Updates

ತೀರಾ ಕಳೆದ ವರ್ಷವಷ್ಟೇ ಕೋವಿಡ್-19ನ ಅತ್ಯಂತ ದೊಡ್ಡ ಹಾಟ್‌ಸ್ಪಾಟ್ ಎಂದು ಕರೆಯಲ್ಪಡುತ್ತಿದ್ದ ಮುಂಬೈನ ಧಾರಾವಿ ಸ್ಲಂ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೇವಲ ಮೂರು ಕೋವಿಡ್ ಪಾಸಿಟಿವ್‌ ಪ್ರಕರಣಗಳು ದಾಖಲಾಗಿವೆ ಎಂದು ಬೃಹನ್ಮುಂಬಯಿ ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ವರ್ಷದ ಫೆಬ್ರವರಿಯಲ್ಲಿ ಕೋವಿಡ್‌ನ ಎರಡನೇ ಅಲೆ ಅಪ್ಪಳಿಸಿದ ಬಳಿಕ ಧಾರಾವಿಯಲ್ಲಿ ದಾಖಲಾದ ಅತ್ಯಂತ ಕಡಿಮೆ ಸಂಖ್ಯೆಯ ಕೋವಿಡ್ ಪ್ರಕರಣಗಳು ಇದಾಗಿದೆ.

ಸದ್ಯದ ಮಟ್ಟಿಗೆ 6,798 ಕೋವಿಡ್ ಸೋಂಕಿತರು ಈ ಪ್ರದೇಶದಲ್ಲಿದ್ದು, ಇವರ ಪೈಕಿ 6,382 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಮಿಕ್ಕ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮನೆಯಲ್ಲೇ ಮಾಡಿ ಸಿಹಿ ಸಿಹಿ ಆಪಲ್ ಪೇಡ

ಏಪ್ರಿಲ್ 1, 2020ರಲ್ಲಿ ಧಾರಾವಿಯಲ್ಲಿ ಕೋವಿಡ್-19 ಸೋಂಕಿತರೊಬ್ಬರು ಮೃತಪಟ್ಟ ಮೊದಲ ಘಟನೆ ಜರುಗಿದ್ದು, ಏಪ್ರಿಲ್-ಮೇ-ಜೂನ್‌ನಲ್ಲಿ ಈ ಪ್ರದೇಶದ ಕೋವಿಡ್ ಸೋಂಕಿತರ ಸಂಖ್ಯೆ ಬೃಹನ್ಮುಂಬಯಿ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು.

ಏಷ್ಯಾದ ಅತಿ ದೊಡ್ಡ ಸ್ಲಂ ಎಂದೇ ಕರೆಯಲಾಗುವ ಧಾರಾವಿಯಲ್ಲಿ ಎಂಟು ಲಕ್ಷಕ್ಕೂ ಹೆಚ್ಚು ಮಂದಿ ಕೇವಲ 2.5 ಚದರಕಿಮೀ ವಿಸ್ತೀಣದಲ್ಲಿ ವಾಸಿಸು‌ತ್ತಿದ್ದು, ಮುಂಬೈನ ಅತ್ಯಂತ ದಟ್ಟವಾದ ಜನಸಾಂದ್ರತೆಯುಳ್ಳ ಪ್ರದೇಶವಾಗಿದೆ.

ಗಾಳಿ-ಬೆಳಕೊಂದೇ ಅಲ್ಲ ಸುಖ-ಸಮೃದ್ಧಿ ತರುತ್ತೆ ʼಕಿಟಕಿʼ

ಕೋವಿಡ್ ಸೋಂಕಿನ ನಿಯಂತ್ರಣದ ವಿಚಾರವಾಗಿ ಧಾರಾವಿಯಲ್ಲಿ ತೆಗೆದುಕೊಂಡ ಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ವಿಶ್ವ ಬ್ಯಾಂಕ್ ಹಾಗೂ ಕೇಂದ್ರ ಸರ್ಕಾರಗಳು ಇದೇ ರೀತಿಯ ಕ್ರಮಗಳನ್ನು ಮಿಕ್ಕೆಲ್ಲ ಕಡೆಯೂ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದವು. ಫಿಲಿಪ್ಪೀನ್ಸ್ ಸಹ ತನ್ನ ರಾಜಧಾನಿ ಮನಿಲಾದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲು ಇಂಥ ಕ್ರಮಗಳನ್ನು ತೆಗೆದುಕೊಳ್ಳಲು ಚಿಂತನೆ ನಡೆಸಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...