ಸಾರ್ವಜನಿಕರಲ್ಲಿ ನಾಗರಿಕ ಪ್ರಜ್ಞೆ ಮೂಡಿಸಲು ಸದಾ ಕ್ರಿಯಾಶೀಲ ಮೆಮೆಗಳನ್ನು ಬಳಸುತ್ತಾ ಬಂದಿರುವ ಮುಂಬೈ ಪೊಲೀಸರು, ಇದೀಗ ಜನಪ್ರಿಯ ಸಿಟ್ಕಾಮ್ ಬ್ರೂಕ್ಲಿನ್ ನೈನ್-ನೈನ್ನಿಂದ ಸ್ಪೂರ್ತಿ ಪಡೆದು ಮೆಮೆಗಳನ್ನು ಬಳಸುತ್ತಿದ್ದಾರೆ.
ಅಮೆರಿಕದ ಕಾಮಿಡಿ ಸೀರೀಸ್ ಆದ ಈ ಸರಣಿಯ ದೃಷ್ಟಾಂತದ ಮೂಲಕ ಮಾಸ್ಕ್ ಧರಿಸದೇ ಎಲ್ಲೆಂದರಲ್ಲಿ ಅಡ್ಡಾಡುವುದು ಎಷ್ಟು ಬೇಜವಾಬ್ದಾರಿಯ ನಡೆ ಎಂದು ತನ್ನ ಟ್ವಿಟರ್ ಹ್ಯಾಂಡಲ್ ಮೂಲಕ ಜಾಗೃತಿ ಮೂಡಿಸುತ್ತಿದೆ ಮುಂಬೈ ಪೊಲೀಸ್ ಇಲಾಖೆ.
ಮೆಮೆಯ ಫೋಟೋದಲ್ಲಿ ಐವರು ನಿಂತಿದ್ದು, ಇದರಲ್ಲಿ ಐದನೇ ವ್ಯಕ್ತಿ ಮಾಸ್ಕ್ ಹಾಕಿಲ್ಲದ ಕಾರಣ ಇತರರ ಜೀವಕ್ಕೆ ಅಪಾಯಕಾರಿಯಾಗಿಬಿಟ್ಟಿದ್ದಾನೆ ಎಂದು ಕ್ಯಾಪ್ಷನ್ ಮೂಲಕ ತಿಳಿಸಲಾಗಿದೆ.
https://www.instagram.com/p/CCXcnZXFXQH/?utm_source=ig_embed