alex Certify ವಿಶಿಷ್ಟವಾಗಿ‌ ‌ʼಮಾʼsk ಮಹತ್ವ ಸಾರಿದ ಮುಂಬೈ ಪೊಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶಿಷ್ಟವಾಗಿ‌ ‌ʼಮಾʼsk ಮಹತ್ವ ಸಾರಿದ ಮುಂಬೈ ಪೊಲೀಸ್

ದೇಶದಲ್ಲಿ ಕೊರೊನಾ ವೈರಸ್​ ದಿನೇ ದಿನೇ ಏರಿಕೆ ಕಾಣ್ತಿರೋದ್ರ ಹಿನ್ನೆಲೆ ಕೇಂದ್ರ ಹಾಗೂ ವಿವಿಧ ರಾಜ್ಯ ಸರ್ಕಾರಗಳು ಸಾಕಷ್ಟು ಕ್ರಮಗಳನ್ನ ಕೈಗೊಳ್ಳುತ್ತಲಿದೆ. ವೀಕೆಂಡ್​ ಕರ್ಫ್ಯೂ, ಸೆಕ್ಷನ್​ 144 ಸೇರಿದಂತೆ ಹಲವಾರು ನಿರ್ಬಂಧಗಳನ್ನ ವಿಧಿಸಿದೆ.

ಇದೀಗ ಮುಂಬೈನ ಪೊಲೀಸ್​ ಇಲಾಖೆ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಶೇರ್​ ಮಾಡುವ ಮೂಲಕ ಜನರಲ್ಲಿ ಮಾಸ್ಕ್ ಧರಿಸುವ ಬಗ್ಗೆ ಜಾಗೃತಿ ಮೂಡಿಸುತ್ತಿದೆ.

ಮುಂಬೈ ಪೊಲೀಸರು ಶೇರ್ ಮಾಡಿರುವ ಈ ಫೋಟೋದಲ್ಲಿ ‘ಮಾ’ ಎಂದು ಹಿಂದಿಯಲ್ಲಿ ಬರೆಯಲಾಗಿದೆ. ಹಾಗೂ ಎಸ್​ ಹಾಗೂ ಕೆ ಯನ್ನ ಇಂಗ್ಲೀಷ್​ನಲ್ಲಿ ಬರೆಯಲಾಗಿದೆ. ಈ ಕ್ರಿಯಾತ್ಮಕ ಪೋಸ್ಟ್​ ಮೂಲಕ ಮುಂಬೈ ಪೊಲೀಸರು ಜೀವನದಲ್ಲಿ ಮಾಸ್ಕ್​​ನ ಮಹತ್ವ ಎಷ್ಟಿದೆ ಎಂಬುದನ್ನ ತೋರಿಸಿದ್ದಾರೆ.

ಅಲ್ಲದೇ ತಾಯಿಗೂ ಹಾಗೂ ಮಾಸ್ಕ್​ ನಡುವೆ ಇರುವ ಸಾಮ್ಯತೆ ಹೇಳಿ ಎಂದು ಶೀರ್ಷಿಕೆ ಮೂಲಕ ಪ್ರಶ್ನೆ ಮಾಡಿದ್ದಾರೆ. ಈ ಪೋಸ್ಟ್​ಗೆ ಕಮೆಂಟ್​ ವಿಭಾಗದಲ್ಲಿ ಸಾಕಷ್ಟು ಮಂದಿ ಉತ್ತರವನ್ನ ನೀಡಿದ್ದಾರೆ. ಬಹುತೇಕ ಮಂದಿ ತಾಯಿ ಹಾಗೂ ಮಾಸ್ಕ್​ಗಳೆರಡೂ ನಮ್ಮ ಸುರಕ್ಷಿತವಾಗಿರಿಸುತ್ತೆ ಎಂದೇ ಬರೆದಿದ್ದಾರೆ.

 

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...