ದೇಶದಲ್ಲಿ ಕೊರೊನಾ ವೈರಸ್ ದಿನೇ ದಿನೇ ಏರಿಕೆ ಕಾಣ್ತಿರೋದ್ರ ಹಿನ್ನೆಲೆ ಕೇಂದ್ರ ಹಾಗೂ ವಿವಿಧ ರಾಜ್ಯ ಸರ್ಕಾರಗಳು ಸಾಕಷ್ಟು ಕ್ರಮಗಳನ್ನ ಕೈಗೊಳ್ಳುತ್ತಲಿದೆ. ವೀಕೆಂಡ್ ಕರ್ಫ್ಯೂ, ಸೆಕ್ಷನ್ 144 ಸೇರಿದಂತೆ ಹಲವಾರು ನಿರ್ಬಂಧಗಳನ್ನ ವಿಧಿಸಿದೆ.
ಇದೀಗ ಮುಂಬೈನ ಪೊಲೀಸ್ ಇಲಾಖೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಶೇರ್ ಮಾಡುವ ಮೂಲಕ ಜನರಲ್ಲಿ ಮಾಸ್ಕ್ ಧರಿಸುವ ಬಗ್ಗೆ ಜಾಗೃತಿ ಮೂಡಿಸುತ್ತಿದೆ.
ಮುಂಬೈ ಪೊಲೀಸರು ಶೇರ್ ಮಾಡಿರುವ ಈ ಫೋಟೋದಲ್ಲಿ ‘ಮಾ’ ಎಂದು ಹಿಂದಿಯಲ್ಲಿ ಬರೆಯಲಾಗಿದೆ. ಹಾಗೂ ಎಸ್ ಹಾಗೂ ಕೆ ಯನ್ನ ಇಂಗ್ಲೀಷ್ನಲ್ಲಿ ಬರೆಯಲಾಗಿದೆ. ಈ ಕ್ರಿಯಾತ್ಮಕ ಪೋಸ್ಟ್ ಮೂಲಕ ಮುಂಬೈ ಪೊಲೀಸರು ಜೀವನದಲ್ಲಿ ಮಾಸ್ಕ್ನ ಮಹತ್ವ ಎಷ್ಟಿದೆ ಎಂಬುದನ್ನ ತೋರಿಸಿದ್ದಾರೆ.
ಅಲ್ಲದೇ ತಾಯಿಗೂ ಹಾಗೂ ಮಾಸ್ಕ್ ನಡುವೆ ಇರುವ ಸಾಮ್ಯತೆ ಹೇಳಿ ಎಂದು ಶೀರ್ಷಿಕೆ ಮೂಲಕ ಪ್ರಶ್ನೆ ಮಾಡಿದ್ದಾರೆ. ಈ ಪೋಸ್ಟ್ಗೆ ಕಮೆಂಟ್ ವಿಭಾಗದಲ್ಲಿ ಸಾಕಷ್ಟು ಮಂದಿ ಉತ್ತರವನ್ನ ನೀಡಿದ್ದಾರೆ. ಬಹುತೇಕ ಮಂದಿ ತಾಯಿ ಹಾಗೂ ಮಾಸ್ಕ್ಗಳೆರಡೂ ನಮ್ಮ ಸುರಕ್ಷಿತವಾಗಿರಿಸುತ್ತೆ ಎಂದೇ ಬರೆದಿದ್ದಾರೆ.
https://www.instagram.com/p/CN1T4dhF0hP/?utm_source=ig_web_copy_link