alex Certify ಗರ್ಲ್​ ಫ್ರೆಂಡ್​ ಭೇಟಿಯಾಗಲು ಮಾಡಬೇಕಾದ್ದೇನು ಎಂದು ಪೊಲೀಸರನ್ನೇ ಪ್ರಶ್ನಿಸಿದ ಭೂಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಲ್​ ಫ್ರೆಂಡ್​ ಭೇಟಿಯಾಗಲು ಮಾಡಬೇಕಾದ್ದೇನು ಎಂದು ಪೊಲೀಸರನ್ನೇ ಪ್ರಶ್ನಿಸಿದ ಭೂಪ

ಮುಂಬೈನಲ್ಲಿ ಕೊರೊನಾ ಕೇಸ್​ ಹೆಚ್ಚಾಗುತ್ತಿರುವ ಹಿನ್ನೆಲೆ ಪೊಲೀಸ್​ ಇಲಾಖೆ ಕೆಲ ಮಹತ್ವದ ಕ್ರಮಗಳನ್ನ ಕೈಗೊಂಡಿದೆ. ರಸ್ತೆಯಲ್ಲಿ ಟ್ರಾಫಿಕ್​ ತಪ್ಪಿಸುವ ಸಲುವಾಗಿ ಕಲರ್​ ಕೋಡೆಡ್​​ ಸ್ಟಿಕರ್​ಗಳನ್ನ ತುರ್ತು ಸೇವಾ ವಾಹನಗಳಿಗೆ ಅಳವಡಿಸಿದ್ದಾರೆ.

ಮುಂಬೈ ಪೊಲೀಸ್​ ಇಲಾಖೆ ಈ ನಿರ್ಧಾರದ ಬಳಿಕ ಟ್ವಿಟರ್​ ಖಾತೆಯಲ್ಲಿ ಜನಸಾಮಾನ್ಯರು ತಮ್ಮ ಗೊಂದಲಗಳನ್ನ ಕೇಳಿದ್ದಾರೆ.

ಸಾಧ್ಯವಾದಷ್ಟು ಎಲ್ಲಾ ಗೊಂದಲಗಳಿಗೆ ಉತ್ತರಿಸಲು ಪೊಲೀಸ್​ ಇಲಾಖೆ ಶ್ರಮಿಸಿದೆ. ಆದರೆ ಅಶ್ವಿನ್​ ವಿನೋದ್​ ಎಂಬ ಹೆಸರಿನ ಟ್ವಿಟರ್​ ಬಳಕೆದಾರರು ಗರ್ಲ್​ ಫ್ರೆಂಡ್​ ಭೇಟಿಯಾಗಬೇಕು ಅಂದರೆ ನಮ್ಮ ವಾಹನಕ್ಕೆ ಯಾವ ಬಣ್ಣದ ಸ್ಟಿಕರ್​ ಹಾಕಿಕೊಳ್ಳಬೇಕು ಎಂದು ಪೊಲೀಸರನ್ನ ಪ್ರಶ್ನೆ ಮಾಡಿದ್ದಾರೆ.

ಟ್ವೀಟಿಗನ ಈ ಪ್ರಶ್ನೆಗೂ ತಾಳ್ಮೆಯಿಂದ ಉತ್ತರಿಸಿದ ಮುಂಬೈ ಪೊಲೀಸ್​ ಇಲಾಖೆ, ನಿಮಗೆ ಇದೊಂದು ತುರ್ತು ಕೆಲಸ ಅನ್ನೋದು ನಮಗೆ ಅರ್ಥವಾಗುತ್ತೆ ಆದರೆ ನಮ್ಮ ತುರ್ತು ಕೆಲಸಗಳ ಅಡಿಯಲ್ಲಿ ಈ ವಿಭಾಗ ಬರೋದಿಲ್ಲ. ಅಂತರ ಕಾಯ್ದುಕೊಳ್ಳೋದ್ರಿಂದ ಪ್ರೀತಿ ಇನ್ನಷ್ಟು ಹೊಳೆಯುತ್ತೆ ಅಲ್ಲದೇ ನೀವು ಕೂಡ ಆರೋಗ್ಯವಾಗಿ ಇರುತ್ತೀರಾ ಎಂದು ಪ್ರತಿಕ್ರಿಯೆ ನೀಡಿದೆ. ನೀವಿಬ್ಬರು ಜೀವಮಾನವಿಡೀ ಒಂದಾಗಿರಿ ಎಂದು ಹಾರೈಸುತ್ತೇವೆ .ಇದೊಂದು ಹಂತವಷ್ಟೇ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...