
ಮುಂಬೈ ಪೊಲೀಸ್ ಇಲಾಖೆ ಈ ನಿರ್ಧಾರದ ಬಳಿಕ ಟ್ವಿಟರ್ ಖಾತೆಯಲ್ಲಿ ಜನಸಾಮಾನ್ಯರು ತಮ್ಮ ಗೊಂದಲಗಳನ್ನ ಕೇಳಿದ್ದಾರೆ.
ಸಾಧ್ಯವಾದಷ್ಟು ಎಲ್ಲಾ ಗೊಂದಲಗಳಿಗೆ ಉತ್ತರಿಸಲು ಪೊಲೀಸ್ ಇಲಾಖೆ ಶ್ರಮಿಸಿದೆ. ಆದರೆ ಅಶ್ವಿನ್ ವಿನೋದ್ ಎಂಬ ಹೆಸರಿನ ಟ್ವಿಟರ್ ಬಳಕೆದಾರರು ಗರ್ಲ್ ಫ್ರೆಂಡ್ ಭೇಟಿಯಾಗಬೇಕು ಅಂದರೆ ನಮ್ಮ ವಾಹನಕ್ಕೆ ಯಾವ ಬಣ್ಣದ ಸ್ಟಿಕರ್ ಹಾಕಿಕೊಳ್ಳಬೇಕು ಎಂದು ಪೊಲೀಸರನ್ನ ಪ್ರಶ್ನೆ ಮಾಡಿದ್ದಾರೆ.
ಟ್ವೀಟಿಗನ ಈ ಪ್ರಶ್ನೆಗೂ ತಾಳ್ಮೆಯಿಂದ ಉತ್ತರಿಸಿದ ಮುಂಬೈ ಪೊಲೀಸ್ ಇಲಾಖೆ, ನಿಮಗೆ ಇದೊಂದು ತುರ್ತು ಕೆಲಸ ಅನ್ನೋದು ನಮಗೆ ಅರ್ಥವಾಗುತ್ತೆ ಆದರೆ ನಮ್ಮ ತುರ್ತು ಕೆಲಸಗಳ ಅಡಿಯಲ್ಲಿ ಈ ವಿಭಾಗ ಬರೋದಿಲ್ಲ. ಅಂತರ ಕಾಯ್ದುಕೊಳ್ಳೋದ್ರಿಂದ ಪ್ರೀತಿ ಇನ್ನಷ್ಟು ಹೊಳೆಯುತ್ತೆ ಅಲ್ಲದೇ ನೀವು ಕೂಡ ಆರೋಗ್ಯವಾಗಿ ಇರುತ್ತೀರಾ ಎಂದು ಪ್ರತಿಕ್ರಿಯೆ ನೀಡಿದೆ. ನೀವಿಬ್ಬರು ಜೀವಮಾನವಿಡೀ ಒಂದಾಗಿರಿ ಎಂದು ಹಾರೈಸುತ್ತೇವೆ .ಇದೊಂದು ಹಂತವಷ್ಟೇ ಎಂದು ಹೇಳಿದ್ದಾರೆ.