
ಟ್ವಿಟರ್ನಲ್ಲಿ ಸಾಕಷ್ಟು ಪೋಸ್ಟ್ಗಳ ಮೂಲಕ ಮುಂಬೈ ಪೊಲೀಸರು ಸುದ್ದಿಯಲ್ಲಿ ಇದ್ದೇ ಇರ್ತಾರೆ. ಇದೀಗ ಮುಂಬೈ ಪೊಲೀಸ್ ಟ್ವಿಟರ್ ಲೋಕದಲ್ಲಿ 5 ವರ್ಷಗಳನ್ನ ಪೂರೈಸಿದ್ದು ಕಳೆದ 5 ವರ್ಷಗಳಲ್ಲಿ ವೈರಲ್ ಆದ ತಮ್ಮ ಟ್ವೀಟ್ಗಳನ್ನ ವಿಡಿಯೋ ರೂಪದಲ್ಲಿ ಶೇರ್ ಮಾಡಿದ್ದಾರೆ.
ಡಿಸೆಂಬರ್ 28, 2015ರಂದು ಟ್ವಿಟರ್ ಲೋಕಕ್ಕೆ ಮುಂಬೈ ಪೊಲೀಸರು ಪಾದಾರ್ಪಣೆ ಮಾಡಿದ್ದರು. ಅಲ್ಲಿಂದ ಇಲ್ಲಿಯವರೆಗೆ ಅವರು ಮಾಡಿರುವ ಟ್ವೀಟ್ಗಳನ್ನ 2 ನಿಮಿಷ 25 ಸೆಕೆಂಡ್ಗಳ ವಿಡಿಯೋ ಮಾಡಿ ಶೇರ್ ಮಾಡುವ ಮೂಲಕ ಹಳೆಯ ನೆನಪುಗಳನ್ನ ಮೆಲಕು ಹಾಕಿದ್ದಾರೆ.
ಅಲ್ಲದೇ ನಿಮಗೆ ಇಷ್ಟವಾದ ನಮ್ಮ ಟ್ವೀಟ್ಗಳನ್ನ MyFavMPTweet ಎಂಬ ಹ್ಯಾಶ್ ಟ್ಯಾಗ್ ಬಳಸಿ ಶೇರ್ ಮಾಡಿ ಅಂತಾ ಮುಂಬೈ ಪೊಲೀಸರು ಹೇಳಿದ್ದರು. ಅದೇ ರೀತಿ ಟ್ವೀಟಿಗರು ತಮಗಿಷ್ಟವಾದ ಮುಂಬೈ ಪೊಲೀಸರ ಸಾಕಷ್ಟು ಟ್ವೀಟ್ಗಳನ್ನ ಹಂಚಿಕೊಂಡಿದ್ದಾರೆ.
https://twitter.com/MumbaiPolice/status/1343773042766348288