ಸೆಕೆಂಡ್ ಹ್ಯಾಂಡ್ಗೆ ಬೈಕ್ ಮಾರಾಟ ಮಾಡಲು ಹೊರಟಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯ ಕಣ್ಣೆದುರಲ್ಲೇ ಟೆಸ್ಟ್ ಡ್ರೈವ್ ನೆಪವೊಡ್ಡಿ ಕಳ್ಳರು ವಾಹನವನ್ನ ಕಳ್ಳತನ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ.
ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ತಮ್ಮ ಬೈಕ್ನ್ನ ಮಾರಾಟ ಮಾಡಲು ನಿರ್ಧರಿಸಿದ್ದ. ಅದರಂತೆಯೇ ಆನ್ಲೈನ್ ಅಪ್ಲಿಕೇಶನ್ ಒಂದರಲ್ಲಿ ಜಾಹಿರಾತನ್ನೂ ನೀಡಿದ್ದ. ಆನ್ಲೈನ್ನಲ್ಲಿ ಬೈಕ್ ಬಗ್ಗೆ ನಮೂದಿಸಲಾಗಿದ್ದ ಮಾಹಿತಿ ಆಧರಿಸಿದ ಇಬ್ಬರು ವಸೈಗೆ ಬಂದು ವಿದ್ಯಾರ್ಥಿಯನ್ನ ಭೇಟಿಯಾಗಿದ್ದಾರೆ.
ಟೆಸ್ಟ್ ಡ್ರೈವ್ ನೆಪವೊಡ್ಡಿದ್ದ ಐನಾತಿಗಳು ವಿದ್ಯಾರ್ಥಿಯ ಕಣ್ಣೆದುರಲ್ಲೇ ಬೈಕ್ ಸಮೇತ ಪರಾರಿಯಾಗಿದ್ದಾರೆ.
ಈ ಸಂಬಂಧ ಬೈಕ್ ಕಳೆದುಕೊಂಡ ಯುವಕ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾನೆ.
ಸಿ ಸಿ ಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.