alex Certify ಶ್ವಾನಗಳ ಮೇಲಿನ ಹಕ್ಕನ್ನೂ ಹಂಚಿಕೊಂಡ ವಿಚ್ಚೇದಿತ ದಂಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ವಾನಗಳ ಮೇಲಿನ ಹಕ್ಕನ್ನೂ ಹಂಚಿಕೊಂಡ ವಿಚ್ಚೇದಿತ ದಂಪತಿ

Mumbai Couple Signs Contract for Sharing Custody of Their Dogs as ...

ವಿಚ್ಚೇದಿತರು ತಮ್ಮ‌ಮಕ್ಕಳನ್ನು ಕಾಲಕಾಲಕ್ಕೆ ತಮ್ಮ ಸುಪರ್ದಿಗೆ ಪಡೆದುಕೊಳ್ಳುವ ಉದಾಹರಣೆ ಸಾಕಷ್ಟಿವೆ.‌ ಇಲ್ಲೊಂದು ವಿಚಿತ್ರ ಪ್ರಕರಣದಲ್ಲಿ ದೂರವಾದ ಪತಿ – ಪತ್ನಿ ತಾವು ಸಾಕಿದ್ದ ನಾಯಿಯನ್ನು ವಿಚ್ಚೇದನ‌ ಒಪ್ಪಂದದ ಭಾಗವನ್ನಾಗಿಸಿಕೊಂಡಿದ್ದಾರೆ.

ಈ ವರ್ಷದ ಫೆಬ್ರವರಿಯಲ್ಲಿ ಮುಂಬೈ ಮೂಲದ ದಂಪತಿಗಳು ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು ಮತ್ತು ತಮ್ಮ ಎರಡು ನಾಯಿಗಳ ಪಾಲನೆಯನ್ನು ಹೇಗೆ ಹಂಚಿಕೊಳ್ಳಬೇಕು ಎಂಬ ಬಗ್ಗೆ ಸ್ಪಷ್ಟತೆ ಮಾಡಿಕೊಂಡಿದ್ದರು.

ದಂಪತಿ ಮದುವೆಯಾಗಿ 18 ವರ್ಷಗಳಾಗಿದ್ದು, ಆ ಸಮಯದಲ್ಲಿ ಇಬ್ಬರು ನಾಯಿ ಮರಿಗಳನ್ನು ರಕ್ಷಿಸಿ ದತ್ತು ಪಡೆದಿದ್ದರು. ಆದರೆ ಅವರು ಬೇರ್ಪಟ್ಟಂತೆ, ಅವರು ತಮ್ಮ ಸಾಕುಪ್ರಾಣಿಗಳ ಭವಿಷ್ಯದ ಬಗ್ಗೆಯೋ ಮಹತ್ವದ ನಿರ್ಣಯ ಮಾಡಿದರು.

ವಿಚ್ಚೇದನ ಒಪ್ಪಂದದ ಪ್ರಕಾರ ಪತಿ ನಾಯಿಗಳ ಪಾಲನೆಯ‌ ಅವಕಾಶ ಪಡೆದನು. ಆದರೆ ಪತ್ನಿ ವರ್ಷಕ್ಕೆ ಮೂರು ಬಾರಿ ಒಂದು ತಿಂಗಳಿನಂತೆ ತೆಗೆದುಕೊಳ್ಳಬಹುದು. ಆಕೆ ಪೂರ್ವಭಾವಿ ಮಾಹಿತಿಯೊಂದಿಗೆ ಅನುಕೂಲಕರ ಸಮಯದಲ್ಲಿ ಭೇಟಿ ಹಕ್ಕುಗಳನ್ನು ಪಡೆದಿದ್ದಾರೆ.

ತಮ್ಮ ಜೀವನಶೈಲಿ ಮತ್ತು ಅಭ್ಯಾಸಗಳು ಹೊಂದಿಕೆಯಾಗದ ಕಾರಣ ದಂಪತಿ 18 ವರ್ಷಗಳ ದಾಂಪತ್ಯ ‌ಜೀವನದ ಬಳಿಕ‌ ಪ್ರತ್ಯೇಕತೆ‌ ಬಯಸಿದ್ದರು. ಅವರು‌ ಮಾಡಿಕೊಂಡ ಒಪ್ಪಂದದ ಪ್ರಕಾರ, ಒಂದು ವಾರದಲ್ಲಿ ಎರಡು ಬಾರಿ ಅಥವಾ ವಾರಾಂತ್ಯದಲ್ಲಿ ನಾಯಿಗಳನ್ನು ವಶಕ್ಕೆ ತೆಗೆದುಕೊಳ್ಳಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...