
ಕೊರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಶ್ರಮಿಕ್ ರೈಲುಗಳ ಮೂಲಕ ತೆರಳುತ್ತಿದ್ದಾರೆ. ಮುಂಬೈನಲ್ಲಿ ಪಶ್ಚಿಮ ಬಂಗಾಳಕ್ಕೆ ಹೊರಟ ರೈಲನ್ನು ಕೊನೆಕ್ಷಣದಲ್ಲಿ ಹತ್ತಲು ಬಂದ ಕಾರ್ಮಿಕರಿಗೆ ಪೊಲೀಸರು ಸಹಕರಿಸಿದ ವಿಡಿಯೋ ಈಗ ವೈರಲ್ ಆಗಿದೆ.
ಕೊನೆಕ್ಷಣದಲ್ಲಿ ವಲಸೆ ಕಾರ್ಮಿಕರ ಗುಂಪೊಂದು ರೈಲು ಹತ್ತಲು ಸಾಧ್ಯವಾಗಿರಲಿಲ್ಲ. ಈ ವೇಳೆ ಪೊಲೀಸರು ಓಡಿ ರೈಲ್ವೆ ಸಿಬ್ಬಂದಿ ಗಮನಕ್ಕೆ ತಂದು, ರೈಲು ನಿಲ್ಲಿಸಿ ಈ ಕಾರ್ಮಿಕರನ್ನೆಲ್ಲ ಅದರಲ್ಲಿ ಹತ್ತಿಸಿ ಕಳಿಸಿದರು.
ಪೊಲೀಸರ ಜತೆ ಅಲ್ಲಿದ್ದ ಒಂದಷ್ಟು ಸ್ವಯಂ ಸೇವಕರು ಘೋಷಣೆ ಹಾಕಿ ವಲಸೆ ಕಾರ್ಮಿಕರನ್ನು ಹುರಿದುಂಬಿಸಿ ಕಳಿಸಿದರು.