alex Certify ಮನೆಗೆ ನುಗ್ಗಿದ್ದ ಹೆಬ್ಬಾವನ್ನು ರಕ್ಷಿಸಿದ ಪೊಲೀಸ್ ಪೇದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಗೆ ನುಗ್ಗಿದ್ದ ಹೆಬ್ಬಾವನ್ನು ರಕ್ಷಿಸಿದ ಪೊಲೀಸ್ ಪೇದೆ

ಮನೆಯಲ್ಲೇ ಇದ್ದುಕೊಂಡು ಹೊಸ ವರ್ಷದ ತಯಾರಿಯಲ್ಲಿದ್ದ ಕುಟುಂಬವೊಂದರ ಮನೆಗೆ ಅನಿರೀಕ್ಷಿತ ಅತಿಥಿಯೊಬ್ಬ ಬಂದ ಕಾರಣ ಇಡೀ ಮನೆಯೇ ಬೆಚ್ಚಿ ಬಿದ್ದ ಘಟನೆ ಮುಂಬಯಿಯಲ್ಲಿ ಜರುಗಿದೆ.

ಆರು ಅಡಿ ಉದ್ದದ ಹೆಬ್ಬಾವೊಂದು ಇಲ್ಲಿನ ಧಾರಾವಿ ಪ್ರದೇಶದಲ್ಲಿರುವ ಮನೆಗೆ ಬಂದು ಮನೆಯ ಸದಸ್ಯರಿಗೆ ಗಾಬರಿ ಉಂಟು ಮಾಡಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸ್ ಪೇದೆಯೊಬ್ಬರು ಹೆಬ್ಬಾವನ್ನು ಅಲ್ಲಿಂದ ತೆರವುಗೊಳಿಸಿದ್ದಾರೆ. ಈ ರಕ್ಷಣಾ ಕಾರ್ಯದ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಅದೀಗ ವೈರಲ್ ಆಗಿದೆ.

ಪೇದೆ ಮುರಳೀಧರ್‌ ಜಾಧವ್ ಅವರು ಅರಣ್ಯ ಇಲಾಖೆ ನೆರವಿನಿಂದ ಹೆಬ್ಬಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...