ಕೊರೊನಾ ಲಸಿಕೆ ಸ್ವೀಕರಿಸಿದ ಬಳಿಕ ತಲೆ ತಿರುಗುವಿಕೆ, ಜ್ವರ, ನಿರ್ಜಲೀಕರಣ ಹಾಗೂ ದೌರ್ಬಲ್ಯದಿಂದ ಬಳಲುತ್ತಿದ್ದ ಮುಂಬೈ ವೈದ್ಯರನ್ನ ವಿ.ಎನ್. ದೇಸಾಯಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.
ವಿ.ಎನ್. ದೇಸಾಯಿ ಆಸ್ಪತ್ರೆಗೆ ದಾಖಲಾಗಿರುವ ಡಾ. ಜಯ್ ರಾಜ್ ಆಚಾರ್ಯ ಜನವರಿ 16ರಂದು ಲಸಿಕೆ ಸ್ವೀಕರಿಸಿದ್ದರು. ಲಸಿಕೆ ಸ್ವೀಕರಿಸಿದ 24 ಗಂಟೆಗಳಲ್ಲಿ ಡಾ. ಆಚಾರ್ಯಗೆ ಪ್ರತಿಕೂಲ ಲಕ್ಷಣ ಕಾಣಿಸಿದೆ. ಜ್ವರ ಹಾಗೂ ತಲೆ ತಿರುಗುವಿಕೆಯಿಂದ ಬಳಲಿದ ವೈದ್ಯರನ್ನ ವಿ.ಎನ್. ದೇಸಾಯಿ ಆಸ್ಪತ್ರೆಗೆ ದಾಖಲು ಮಾಡಲಾಯ್ತು.
ಇನ್ನು ಈ ವಿಚಾರವಾಗಿ ಮಾತನಾಡಿದ ನಗರಸಭೆ ಹೆಚ್ಚುವರಿ ಆಯುಕ್ತ ಸುರೇಶ್ ಕಾಕಾನಿ, ಲಸಿಕೆ ಸ್ವೀಕರಿಸಿದ ಬಳಿಕ ವೈದ್ಯರು ಪ್ರತಿಕೂಲ ಲಕ್ಷಣಗಳನ್ನ ಅನುಭವಿಸಿದ್ದಾರೆ. ಹೀಗಾಗಿ ಅವರನ್ನ ಮುಂಜಾಗ್ರತಾ ಕ್ರಮವಾಗಿ ಐಸಿಯುವಿನಲ್ಲಿ ಇರಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ ಅಂತಾ ಮಾಹಿತಿ ನೀಡಿದ್ರು.