ಕೋವಿಡ್-19 ಅನಿಶ್ಚಿತತೆಯ ನಡುವೆಯೇ ಈ ವರ್ಷದ ಗಣೇಶ ಹಬ್ಬವನ್ನು ಆಚರಿಸಲು ಮಹಾರಾಷ್ಟ್ರ ಸಿದ್ಧವಾಗುತ್ತಿದೆ.
ಮುಂಬೈ ಘಾಟ್ಕೋಪರ್ ಪ್ರದೇಶದ ಕಲಾವಿದರೊಬ್ಬರು ಸ್ಯಾನಿಟೈಸರ್ ವಿತರಣೆ ಮಾಡುವ ವಿಶೇಷವಾದ ಗಣೇಶ ಮೂರ್ತಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಮೂರ್ತಿಗಳಿಗೆ ಸೆನ್ಸಾರ್ ಯಂತ್ರಗಳನ್ನು ಅಳವಡಿಸಿದ್ದು, ಯಾರಾದರೂ ಇವುಗಳ ಕೆಳಗೆ ಕೈ ಇಟ್ಟ ಕೂಡಲೇ ಸ್ಯಾನಿಟೈಸರ್ ಅನ್ನು ಡಿಸ್ಪೆನ್ಸ್ ಮಾಡುತ್ತದೆ.
ಈ ಬಗ್ಗೆ ಮಾತನಾಡಿದ ಮೂರ್ತಿಯ ನಿರ್ಮಾತೃ ರಾಮದಾಸ್ ಚೌಧರಿ, “ನಮ್ಮೆಲ್ಲಾ ಸಮಸ್ಯೆಗಳನ್ನು ಗಣೇಶ ಭಗವಂತ ಪರಿಹರಿಸುತ್ತಾನೆ ಎಂದು ನಾವು ನಂಬಿರುವ ಕಾರಣ, ಈ ಮೂರ್ತಿಗೆ ಸ್ಯಾನಿಟೈಸರ್ ಅನ್ನು ಆಯುಧವನ್ನಾಗಿ ಇಟ್ಟಿದ್ದೇನೆ. ಗಣೇಶ ನಮ್ಮನ್ನೆಲ್ಲಾ ಕೊರೊನಾ ವೈರಸ್‌ನಿಂದ ದೂರವಿಡುತ್ತಾನೆ ಎಂದು ಇದು ಸೂಚಿಸುತ್ತದೆ. ದರ್ಶನ ಪಡೆಯಲು ಭಕ್ತಗಣ ಬಂದಾಗ ಈ ಆಯುಧದ ಮೂಲಕ ಸ್ಯಾನಿಟೈಸರ್ ಅನ್ನು ಡಿಸ್ಪೆನ್ಸ್ ಮಾಡಲಾಗುವುದು,” ಎಂದು ತಿಳಿಸಿದ್ದಾರೆ.