ಇಲ್ಲಿಯವರೆಗೆ ದೇಶದ ಜನರು ಕೊರೊನಾ ವೈರಸ್‌ಗೆ ಹೆದರುತ್ತಿದ್ದರು. ಈಗ ಕೊರೊನಾ ವೈರಸ್‌ಗಿಂತ ಹೆಚ್ಚು ಅಪಾಯಕಾರಿ ಕಾಯಿಲೆ ಕಾಣಿಸಿಕೊಂಡಿದೆ. ಈ ರೋಗದ ಮೊದಲ ಪ್ರಕರಣ ಗುಜರಾತ್‌ನ ಸೂರತ್‌ನಲ್ಲಿ ಕಂಡು ಬಂದಿದೆ. ಸೂರತ್‌ನ ಮಗುವಿನಲ್ಲಿ ಈ ರೋಗದ ಲಕ್ಷಣಗಳು ಕಂಡುಬಂದಿವೆ.
ಈ ರೋಗಕ್ಕೆ ಮಲ್ಟಿಸಿಸ್ಟಮ್ ಇನ್ಫ್ಲಾಮೇಟರಿ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಎಂಐಎಸ್-ಸಿ ಎಂದೂ ಕರೆಯುತ್ತಾರೆ. ಸೂರತ್‌ನಲ್ಲಿ ವಾಸಿಸುವ 10 ವರ್ಷದ ಮಗುವಿನ ದೇಹದಲ್ಲಿ ಮಲ್ಟಿ ಸಿಸ್ಟಮ್ ಇನ್ಫ್ಲಾಮೇಟರಿ ಸಿಂಡ್ರೋಮ್ ಕಂಡುಬಂದಿದೆ. ಈ ರೋಗವು ಯುಎಸ್ ಮತ್ತು ಯುರೋಪಿಯನ್ ದೇಶಗಳಲ್ಲಿ ಮಾತ್ರ ಇಲ್ಲಿಯವರೆಗೆ ಕಾಣಿಸಿಕೊಂಡಿತ್ತು.
ಮಗುವಿಗೆ ಜ್ವರ, ವಾಂತಿ, ಕೆಮ್ಮು, ಅತಿಸಾರವಿತ್ತು. ಕಣ್ಣು ಮತ್ತು ತುಟಿಗಳು ಕೆಂಪಾಗಿದ್ದವು. ಪರೀಕ್ಷೆ ನಡೆಸಿದಾಗ ಎಂಐಎಸ್-ಸಿ ಎಂಬುದು ಗೊತ್ತಾಗಿದೆ. ವೈದ್ಯರು ಚಿಕಿತ್ಸೆ ನೀಡಿ ಮಗುವನ್ನು ಮನೆಗೆ ಕಳುಹಿಸಿದ್ದಾರೆ. ಸ್ವಲ್ಪ ತಡವಾಗಿದ್ರೆ ಮಗುವಿಗೆ ಹೃದಯಾಘಾತವಾಗುವ ಸಾಧ್ಯತೆಯಿತ್ತಂತೆ. ಇದು 3 ವರ್ಷದಿಂದ 20 ವರ್ಷದವರನ್ನು ಕಾಡುತ್ತದೆ. ರೋಗ ಲಕ್ಷಣ ಕಾಣಿಸಿಕೊಳ್ತಿದ್ದಂತೆ ವೈದ್ಯರನ್ನು ಭೇಟಿಯಾಗುವುದು ಸೂಕ್ತ.