alex Certify ಒಬ್ಬನೊಂದಿಗೇ ಸಂಬಂಧ ಬೆಳೆಸಿದ ತಾಯಿ-ಮಗಳು, ತಡರಾತ್ರಿ ಇಬ್ಬರನ್ನೂ ರೂಮ್ ಗೆ ಕರೆದೊಯ್ದ ಪ್ರಿಯಕರನಿಂದ ಘೋರ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಬ್ಬನೊಂದಿಗೇ ಸಂಬಂಧ ಬೆಳೆಸಿದ ತಾಯಿ-ಮಗಳು, ತಡರಾತ್ರಿ ಇಬ್ಬರನ್ನೂ ರೂಮ್ ಗೆ ಕರೆದೊಯ್ದ ಪ್ರಿಯಕರನಿಂದ ಘೋರ ಕೃತ್ಯ

ಉತ್ತರಪ್ರದೇಶದ ಬರೇಲಿ ಜಿಲ್ಲೆಯ ಸುಭಾಷ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಸ್ತಿ ಗ್ರಾಮದಲ್ಲಿ ಯುವತಿಯೊಬ್ಬಳನ್ನು ಕೊಲೆ ಮಾಡಲಾಗಿದೆ.

ಯುವತಿಯ ತಾಯಿ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾಗಿರುವ 19 ವರ್ಷದ ಯುವತಿಯನ್ನು ಪ್ರೀತಿಸಿದ್ದ ಆರೋಪಿ ಯುವಕ, ಆಕೆಯ ತಾಯಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದ. ಕೊಲೆ ಮಾಡಿದ 3 ಗಂಟೆಯೊಳಗೆ ಮೃತ ಯುವತಿಯ ತಾಯಿ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

ಮನೆಗೆ ನುಗ್ಗಿದ ಮೂವರು ದುಷ್ಕರ್ಮಿಗಳು ದಾಳಿ ಮಾಡಿ ಮಗಳು, ತನ್ನ ಮೇಲೆ ಹಲ್ಲೆ ಮಾಡಿದ್ದಾರೆ. ದಾಳಿಯ ವೇಳೆ ಪುತ್ರಿ ಮೃತಪಟ್ಟಿದ್ದಾಳೆ ಎಂದು ಮಹಿಳೆ ಮನೆಯವರು, ಪೊಲೀಸರಿಗೆ ತಿಳಿಸಿದ್ದಾಳೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ಮಹಿಳೆಯ ನಡವಳಿಕೆ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದ್ದಾರೆ.

ಯುವತಿಯನ್ನು ಪ್ರೀತಿಸಿದ್ದ ಆರೋಪಿ ಯುವಕ ಆಕೆಯ ತಾಯಿಯೊಂದಿಗೆ ಸಂಬಂಧ ಬೆಳೆಸಿದ್ದ. ಮದುವೆ ಮಾಡಿಕೊಳ್ಳುವಂತೆ ಯುವತಿ ಒತ್ತಡ ಹಾಕುತ್ತಿದ್ದರಿಂದ ಆಕ್ರೋಶಗೊಂಡ ಯುವಕ ಎಲ್ಲರೂ ಮಲಗಿದ್ದ ವೇಳೆಯಲ್ಲಿ ಮಹಿಳೆಯ ಮನೆಗೆ ಹೋಗಿ ಯುವತಿ ಹಾಗೂ ಆಕೆಯ ತಾಯಿಯನ್ನು ಕೊಠಡಿಯೊಂದಕ್ಕೆ ಕರೆದುಕೊಂಡು ಹೋಗಿದ್ದಾನೆ. ತಾಯಿಯೊಂದಿಗೆ ಸೇರಿ ವೇಲ್ ನಿಂದ ಯುವತಿಯ ಕತ್ತು ಬಿಗಿದು ಕೊಲೆ ಮಾಡಿದ್ದಾರೆ. ಬಳಿಕ ಚಾಕುವಿನಿಂದ ಮಹಿಳೆಗೆ ಇರಿದು ಯುವಕ ಪರಾರಿಯಾಗಿದ್ದಾನೆ. ಪ್ರಿಯಕರ ಹೊರ ಹೋಗುತ್ತಿದ್ದಂತೆ ಜೋರಾಗಿ ಕೂಗಿಕೊಂಡ ಮಹಿಳೆ ಮೂವರು ಬಂದು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ಸುಳ್ಳು ಹೇಳಿದ್ದಾಳೆ.

ಈ ವೇಳೆಗಾಗಲೇ ಯುವತಿ ಮೃತಪಟ್ಟಿರುವುದು ಗೊತ್ತಾಗಿದೆ. ಪೊಲೀಸರು ಅನುಮಾನದ ಮೇಲೆ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಹಿಳೆಯೇ ಪ್ರಿಯಕರನೊಂದಿಗೆ ಸೇರಿ ಮಗಳನ್ನು ಕೊಲೆ ಮಾಡಿರುವುದು ಗೊತ್ತಾಗಿದೆ. ಮಗಳು ಕೂಡ ತನ್ನ ಪ್ರಿಯಕರನೊಂದಿಗೆ ಸಂಬಂಧ ಹೊಂದಿರುವುದನ್ನು ಸಹಿಸದೇ ಮಹಿಳೆ ಹೀಗೆ ಮಾಡಿದ್ದಾಳೆ ಎನ್ನಲಾಗಿದೆ.

ತಾಯಿ ಮತ್ತು ಮಗಳೊಂದಿಗೆ ಯುವಕ ಅಕ್ರಮ ಸಂಬಂಧ ಹೊಂದಿರುವುದು ಆತನ ಮನೆಯವರಿಗೆ ತಿಳಿದಿದ್ದು ಅವರ ಮನೆಯಲ್ಲಿ ದಿನವೂ ಜಗಳವಾಗುತ್ತಿತ್ತು. ಕೆಲವೇ ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಶೈಲೇಶ್ ಪಾಂಡೆ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...