ಮಗುವಿಗೆ ಚಿಕ್ಕ ಗಾಯವಾದರೂ ಸಹ ತಾಯಿಯಾದವಳ ಮನಸ್ಸು ಮಿಡಿಯುತ್ತೆ. ಈ ತಾಯಿ ವಾತ್ಸಲ್ಯ ಕೇವಲ ಮನುಷ್ಯರಲ್ಲಿ ಮಾತ್ರವಲ್ಲದೇ ಹಸುಗಳಲ್ಲೂ ಇದೆ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿ.
ಗಾಯಗೊಂಡಿದ್ದ ಕರುವೊಂದನ್ನ ರಿಕ್ಷಾದಲ್ಲಿ ಸಾಗಿಸಲಾಗುತ್ತಿತ್ತು. ಆದರೆ ಆ ವಾಹನದ ಹಿಂದೆಯೇ ತಾಯಿ ಹಸು ಓಡೋಡಿ ಬಂದಿದೆ. ವಾಹನದ ವೇಗಕ್ಕೆ ಸರಿಯಾಗಿ ತಾಯಿ ಹಸು ಬರೋಬ್ಬರಿ ಮೂರು ಕಿಲೋಮೀಟರ್ ದೂರದವರೆಗೆ ಓಡಿದೆ.
ಈ ದೃಶ್ಯ ಪ್ರತ್ಯಕ್ಷದರ್ಶಿಗಳ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
https://youtu.be/SE7evTjNcxQ?t=3