alex Certify ʼಲಾಕ್ ಡೌನ್ʼ ವೇಳೆ ಗೂಗಲ್ ನಲ್ಲಿ ಸರ್ಚ್ ಆಗ್ತಿದೆ ಈ ವಿಷಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಲಾಕ್ ಡೌನ್ʼ ವೇಳೆ ಗೂಗಲ್ ನಲ್ಲಿ ಸರ್ಚ್ ಆಗ್ತಿದೆ ಈ ವಿಷಯ

ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಜನರು ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಹೊಟೇಲ್ ಗೆ ಹೋಗಿ ತಿಂಡಿ ತಿನ್ನುವ, ಬೀದಿ ಬದಿಯಲ್ಲಿ ಫಾಸ್ಟ್ ಫುಡ್ ಸೇವಿಸುವ ಅವಕಾಶ ಸಿಗ್ತಿಲ್ಲ. ಹಾಗಾಗಿ ಜನರು ಮನೆಯಲ್ಲಿಯೇ ಇಷ್ಟದ ತಿಂಡಿ ಸಿದ್ದಪಡಿಸಿ ಅದ್ರ ಸವಿ ಸವಿಯುತ್ತಿದ್ದಾರೆ. ಗೂಗಲ್ ನಲ್ಲಿ ಅನೇಕ ಆಹಾರಗಳು ಲಾಕ್ ಡೌನ್ ವೇಳೆ ಸರ್ಚ್ ಆಗಿದೆ.

ಗೂಗಲ್ ನಲ್ಲಿ ಜನರು ಡಾಲ್ಗಾನಾ ಕಾಫಿ, ಬಾಳೆಹಣ್ಣು ಬ್ರೆಡ್, ಪಿಜ್ಜಾ ಸರ್ಚ್ ಮಾಡ್ತಿದ್ದಾರೆ. ಮೈಕ್ರೋವೇವ್ ಮೇಲೆ ರೊಟ್ಟಿ ಹೇಗೆ ಬೇಯಿಸುವುದು ಎನ್ನುವ ಬಗ್ಗೆಯೂ ಹೆಚ್ಚು ಸರ್ಚ್ ಆಗಿದೆಯಂತೆ. ಗೂಗಲ್ ನಲ್ಲಿ ಅತಿ ಹೆಚ್ಚಾಗಿ ಜನರು ಬಾಳೆಹಣ್ಣಿನ ಬ್ರೆಡ್ ಹೇಗೆ ತಯಾರಿಸುವುದು ಎಂಬುದನ್ನು ಸರ್ಚ್ ಮಾಡಲಾಗಿದೆಯಂತೆ. ಸಾಮಾನ್ಯ ಜನರು ಸೇರಿದಂತೆ ಆಲಿಯಾ ಭಟ್, ಸೋನಮ್ ಕಪೂರ್ ಕೂಡ ಇದನ್ನು ಹುಡುಕಿದ್ದಾರಂತೆ.

ಇದಲ್ಲದೆ ಫ್ರೆಂಚ್ ಟೋಸ್ಟ್, ಚಿಕನ್, ಚಾಕೊಲೇಟ್ ಕೇಕ್, ಕ್ಯಾರೆಟ್ ಕೇಕ್ ಮತ್ತು ಜನಪ್ರಿಯ ಡಾಲ್ಗೊನಾ ಕಾಫಿ ಪಾಕವಿಧಾನ ಸೇರಿವೆ. ಫ್ರೈಡ್ ರೈಸ್, ಗೋಮಾಂಸ ಪಾಕವಿಧಾನಗಳನ್ನು ಹುಡುಕುತ್ತಿದ್ದಾರೆ. ಜಂಕ್ ಫುಡ್ ಪ್ರಿಯರು ಅದನ್ನು ಸರ್ಚ್ ಮಾಡ್ತಿದ್ದು, ಅದ್ರಲ್ಲಿ ಸಿಹಿ ಆಲೂಗಡ್ಡೆ ಚಿಪ್ಸ್ ಹೆಚ್ಚು ಸರ್ಚ್ ಆಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...