
ಸಾರ್ವಜನಿಕರ ಸರಾಸರಿ ಆದ್ಯತೆಗಳು ಏನು ಎಂಬುದನ್ನು ಸರ್ಚ್ ಎಂಜಿನ್ ಫಲಿತಾಂಶಗಳ ಮೂಲಕ ಸುಲಭವಾಗಿ ತಿಳಿದುಕೊಳ್ಳಬಹುದಾಗಿರುವ ಮಾಹಿತಿ ಯುಗ ಇದು.
ಇಡೀ ಜಗತ್ತೇ ಕೊರೊನಾ ವೈರಸ್ ಸಂಬಂಧಿ ಅಪ್‌ಡೇಟ್‌ಗಳಿಗೆ ಎಡತಾಕುತ್ತಿದ್ದರೆ ಭಾರತದಲ್ಲಿ ನೇಹಾ ಕಕ್ಕರ್‌ರನ್ನು ಗೂಗಲ್ ಸರ್ಚ್ ಮಾಡುವಲ್ಲಿ ನೆಟ್ಟಿಗರು ಬ್ಯುಸಿಯಾಗಿದ್ದರು ಎಂದು ತಿಳಿದು ಬಂದಿದೆ.
ತಮ್ಮ ಮುಂಬರುವ ಹಾಡು ’ಖಯಾಲ್ ರಖ್ಯಾ ಕರ್’ ಬಿಡುಗಡೆಗೂ ಮುನ್ನ ಪ್ರೊಮೋ ಮಾಡುವ ಭರದಲ್ಲಿ ಇರುವ ನೇಹಾ ಕಕ್ಕರ್ ಎಂಬ ಈ ಹಾಡುಗಾತಿ ತನ್ನನ್ನು ಗರ್ಭಿಣಿಯಂತೆ ತೋರಿಸಿಕೊಂಡು ಫೋಟೋ ಶೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ತಮ್ಮ ಪತಿ ರೋಹನ್‌ಪ್ರೀತ್ ಸಿಂಗ್ ಜೊತೆಗೆ ಗರ್ಭವತಿಯಾಗಿ ನಿಂತಿರುವ ತಮ್ಮದೇ ಚಿತ್ರವನ್ನು ಕಕ್ಕತ್ ಕಳೆದ ವಾರ ಶೇರ್ ಮಾಡಿಕೊಂಡಿದ್ದರು. ಈ ಚಿತ್ರ ಬಲೇ ವೈರಲ್ ಆಗಿದ್ದು, ಸಾಕಷ್ಟು ಮೆಮೆಗಳು ಹಾಗೂ ಹಾಸ್ಯದ ಸರಕುಗಳಿಗೆ ಆಹಾರವಾಗಿತ್ತು.