ಇಲ್ಲಿಯವರೆಗೆ ನೀವು ದೇವಾಲಯಗಳಲ್ಲಿ ವಿವಿಧ ದೇವರನ್ನ ಪೂಜೆ ಮಾಡೋದನ್ನ ನೋಡಿರ್ತೀರಾ. ಆದರೆ ಯಾವ ದೇವಾಲಯದಲ್ಲಾದರೂ ಮನುಷ್ಯರನ್ನ ಪ್ರಾಣಿಗಳನ್ನ ಪೂಜೆ ಮಾಡೋದನ್ನ ಕಂಡಿದ್ದೀರಾ..? ಇಲ್ಲ ಅನ್ನೋದು ನಿಮ್ಮ ಉತ್ತರವಾದ್ರೆ ನೀವು ಈ ಸ್ಟೋರಿಯನ್ನ ಓದಲೇಬೇಕು.
ರಾಜಸ್ಥಾನದ ಜೋಧಪುರದ ಭೋಪಾಲಗಢದಲ್ಲಿರುವ ಮಂದಿರದಲ್ಲಿ ಜನರು ಕೋತಿಗಳನ್ನ ಪೂಜೆ ಮಾಡಬೇಕು ಅಂತಾನೇ ಭಕ್ತ ಸಾಗರವೇ ನೆರೆಯುತ್ತದೆ. ಕೋತಿಗಳ ಜೊತೆಯಲ್ಲಿ ಇಲ್ಲಿ ಬಾಲಾಜಿಯ ಮೂರ್ತಿ ಕೂಡ ಪ್ರತಿಷ್ಠಾಪನೆ ಮಾಡಲಾಗಿದ್ದು ಇದರ ಪೂಜೆಯೂ ನಡೆಯುತ್ತದೆ. ಈ ಬಾಲಾಜಿಯನ್ನ ಕರೆಂಟ್ ಬಾಲಾಜಿ ಎಂದು ಕರೆಯಲಾಗುತ್ತೆ. 23 ವರ್ಷಗಳ ಹಿಂದೆ ಇಲ್ಲಿ ಕರೆಂಟ್ ಶಾಕ್ನಿಂದಾಗಿ ಕೋತಿಯೊಂದು ಸಾವನ್ನಪ್ಪಿತ್ತು. ಕೋತಿಯ ಸಾವಿನಿಂದ ದೇವಾಲಯದಲ್ಲಿ ಕೆಲಸ ಮಾಡುತ್ತಿದ್ದ ಅನೇಕರು ದುಃಖಿತರಾಗಿದ್ದರು. ಅವರೆಲ್ಲ ಸೇರಿ ಇದೇ ಜಾಗದಲ್ಲಿ ಕೋತಿಯ ಸಮಾಧಿ ಮಾಡಿದ್ದರು.
1998ರಲ್ಲಿ ವಿದ್ಯುತ್ ಕೆಲಸ ಮಾಡುತ್ತಿದ್ದ ವೇಳೆ ಕೋತಿ ಸಾವನ್ನಪ್ಪಿತ್ತು. ಹೀಗಾಗಿ ಇದೇ ಜಾಗದಲ್ಲಿ ಕೋತಿಯ ಸಮಾಧಿ ನಿರ್ಮಿಸಿದ ಬಳಿಕ ಸಾರ್ವಜನಿಕರ ಬಳಿ ಚಂದಾ ಸಂಗ್ರಹ ಮಾಡಿ ದೇಗುಲವನ್ನ ನಿರ್ಮಿಸಲಾಗಿದೆ. ಇಲ್ಲಿ ಪ್ರತಿ ವರ್ಷವೂ ದೇಗುಲ ವರ್ಷಾಚರಣೆ ಮಾಡಲಾಗುತ್ತೆ. ಈ ದಿನದಂದು ಬಾಲಾಜಿ ಮೂರ್ತಿಯ ಜೊತೆಗೆ ಕೋತಿಗಳ ಪೂಜೆಯನ್ನೂ ನೆರವೇರಿಸಲಾಗುತ್ತೆ.