alex Certify ವಿವಾಹ ವಾರ್ಷಿಕೋತ್ಸವದಲ್ಲಿ ಕಪಿ ಚೇಷ್ಟೆ…! ಕೇಕ್ ಯಾರ ಪಾಲಾಯ್ತು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾಹ ವಾರ್ಷಿಕೋತ್ಸವದಲ್ಲಿ ಕಪಿ ಚೇಷ್ಟೆ…! ಕೇಕ್ ಯಾರ ಪಾಲಾಯ್ತು ಗೊತ್ತಾ…?

ವಿವಾಹ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಿಸಿಕೊಳ್ಳಬೇಕೆಂಬ ಉದ್ದೇಶದಿಂದ ಕುಟುಂಬವೊಂದು ಅರಣ್ಯದಲ್ಲಿ ಸಂಭ್ರಮಿಸುತ್ತಿದ್ದಾಗ ಮಂಗ ಅವರ ಖುಷಿಯನ್ನು ಕಸಿದ ಪ್ರಸಂಗದ ವಿಡಿಯೋ ವೈರಲ್ ಆಗಿದೆ.

ಅರಣ್ಯ ಅಧಿಕಾರಿ ಸುಶಾಂತ್ ನಂದಾ ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅರಣ್ಯದ ನಡುವೆ ವ್ಯಕ್ತಿಯೊಬ್ಬ ಕೇಕನ್ನು ತಂದಿಟ್ಟು ಅದನ್ನು ಕತ್ತರಿಸಿದ್ದಾನೆ. ಇನ್ನೇನು ಅದನ್ನು ಎಲ್ಲರಿಗೂ ಹಂಚಬೇಕೆಂದುಕೊಳ್ಳುವಷ್ಟರಲ್ಲೇ ಅಚಾನಕ್ಕಾಗಿ ಮಂಗ ಅಲ್ಲಿಗೆ ಬಂದು ಕೇಕನ್ನು ಹೊತ್ತೊಯ್ಯಿತು. ಅಯ್ಯೊ ಎಂದು ಅಲ್ಲಿದ್ದವರು ಕಣ್ಣು ಮಿಟುಕಿಸುವುದರೊಳಗೆ ಮಂಗ ಮರ ಏರಿತ್ತು.

ಈ ವಿಡಿಯೋವನ್ನು ನೋಡಿದ ಜಾಲತಾಣಿಗರು ಬಗೆಬಗೆಯಾಗಿ ಪ್ರತಿಕ್ರಿಯೆ ನೀಡಿ ಖುಷಿಪಟ್ಟಿದ್ದಾರೆ. ಒಬ್ಬರಂತೂ ಮಂಗಕ್ಕೆ ಸಿಂಹಪಾಲು ಕೇಕ್ ಸಿಕ್ಕಿತು ಎಂದು ಅಭಿಪ್ರಾಯ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...