ವಿವಾಹ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಿಸಿಕೊಳ್ಳಬೇಕೆಂಬ ಉದ್ದೇಶದಿಂದ ಕುಟುಂಬವೊಂದು ಅರಣ್ಯದಲ್ಲಿ ಸಂಭ್ರಮಿಸುತ್ತಿದ್ದಾಗ ಮಂಗ ಅವರ ಖುಷಿಯನ್ನು ಕಸಿದ ಪ್ರಸಂಗದ ವಿಡಿಯೋ ವೈರಲ್ ಆಗಿದೆ.
ಅರಣ್ಯ ಅಧಿಕಾರಿ ಸುಶಾಂತ್ ನಂದಾ ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಅರಣ್ಯದ ನಡುವೆ ವ್ಯಕ್ತಿಯೊಬ್ಬ ಕೇಕನ್ನು ತಂದಿಟ್ಟು ಅದನ್ನು ಕತ್ತರಿಸಿದ್ದಾನೆ. ಇನ್ನೇನು ಅದನ್ನು ಎಲ್ಲರಿಗೂ ಹಂಚಬೇಕೆಂದುಕೊಳ್ಳುವಷ್ಟರಲ್ಲೇ ಅಚಾನಕ್ಕಾಗಿ ಮಂಗ ಅಲ್ಲಿಗೆ ಬಂದು ಕೇಕನ್ನು ಹೊತ್ತೊಯ್ಯಿತು. ಅಯ್ಯೊ ಎಂದು ಅಲ್ಲಿದ್ದವರು ಕಣ್ಣು ಮಿಟುಕಿಸುವುದರೊಳಗೆ ಮಂಗ ಮರ ಏರಿತ್ತು.
ಈ ವಿಡಿಯೋವನ್ನು ನೋಡಿದ ಜಾಲತಾಣಿಗರು ಬಗೆಬಗೆಯಾಗಿ ಪ್ರತಿಕ್ರಿಯೆ ನೀಡಿ ಖುಷಿಪಟ್ಟಿದ್ದಾರೆ. ಒಬ್ಬರಂತೂ ಮಂಗಕ್ಕೆ ಸಿಂಹಪಾಲು ಕೇಕ್ ಸಿಕ್ಕಿತು ಎಂದು ಅಭಿಪ್ರಾಯ ನೀಡಿದ್ದಾರೆ.